ಕಣಿಯೂರು: ಮೂಲ್ಯ ಯಾನೆ ಕುಲಾಲ ಸೇವಾ ಸಂಘ ಕಣಿಯೂರು ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮನ.17ರಂದು ವಿಶ್ವನಾಥ್ ಕುಲಾಲ್ ಮಲೆಂಗಲ್ಲು ಇವರ ಮನೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲರಾದ ಉದಯ್ ಬಿ ಕೆ ಬಂದಾರು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುವುದರ ಮೂಲಕ ಸಮಾಜ ಹಾಗೂ ದೇಶವನ್ನು ಕಟ್ಟುವ ಕೆಲಸವನ್ನು ಮಾಡಬೇಕು ಮತ್ತು ಅವರ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು.
ಕಣಿಯೂರು ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದ ವಿಶ್ವನಾಥ್ ಮಲಿಂಗಲ್ಲು ಇವರ ಸಾಧನೆಯನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಿಯೂರು ಸಂಘದ ಅಧ್ಯಕ್ಷ ಉಮೇಶ್ ಪಿಲಿಗೂಡು ವಹಿಸಿಕೊಂಡರು. ಅಶೋಕ್ ಬರಂಬು, ವಿಶ್ವನಾಥ್ ಮಲೆಂಗಲ್ಲು ಉಪಸ್ಥಿತರಿದ್ದರು. ಹರಿನಾಕ್ಷಿ ಸ್ವಾಗತಿಸಿದರು. ಕುಮಾರಿ ರಮ್ಯಾ ವಂದಿಸಿದರು. ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.