ವೇಣೂರು: ಶ್ರೀ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆ ಪ್ರಯುಕ್ತ ವೇಣೂರು ವಲಯದ ಪೂರ್ವ ಭಾವಿ ಸಭೆ ನ. 17ರಂದು ವೇಣೂರು ವಲಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿ ರಚನೆ ಮಾಡಲಾಯಿತು ಮತ್ತು ಪಾದಯಾತ್ರೆ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ವೇಣೂರು ವಲಯ ಅಧ್ಯಕ್ಷ ಗಿರೀಶ್ ಬಜಿರೆ, ಪಾದಯಾತ್ರೆ ಸಮಿತಿಯ ಗೌರವ ಅದ್ಯಕ್ಷ ಗಿರೀಶ್ ಕೆ ಎಸ್, ನವ ಜೀವನ ಸಮಿತಿಯ ಅಧ್ಯಕ್ಷ ಶ್ರೀಧರ ಹೆಗ್ಡೆ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶೋಕ್ ಕಜಿಪಟ್ಟ , ಪಾದಯಾತ್ರೆ ಸಮಿತಿಯ ಉಪಾಧ್ಯಕ್ಷ ಜಯ ಜಂಕರ ಹೆಗ್ಡೆ, ವಲಯದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಶೌರ್ಯ ವಿಪತ್ತು ಸದಸ್ಯರು, ವಲಯದ ಮೇಲ್ವಿಚಾರಕರು ಹಾಗು ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.