ಬೆಳ್ತಂಗಡಿ: ಪುತ್ತೂರು ಅಕ್ಷಯ ಕಾಲೇಜು ಪಿಯುಸಿ ವಿಭಾಗದವರಿಗೆ ಆಯೋಜಿಸಿದ್ದ ಅಂತರ ಕಾಲೇಜು ಪೆಸ್ಟ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ 27 ಪದವಿ ಪೂರ್ವ ಕಾಲೇಜುಗಳು ಭಾಗವಹಿಸಿದ್ದ ಈ ಸ್ಪರ್ಧೆಗಳಲ್ಲಿ, ವೈಯಕ್ತಿಕ ನೃತ್ಯದಲ್ಲಿ ನಂದನ್ ಪ್ರಥಮ, ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಸುದರ್ಶನ್ ಪ್ರಥಮ, ಮಡಕೆ ಬಣ್ಣಗಾರಿಕೆಯಲ್ಲಿ ಅನನ್ಯ ಪ್ರಥಮ, ಯುರೇಕಾ ರಸಪ್ರಶ್ನೆಯಲ್ಲಿ ಆದಿತ್ಯ, ಆಕಾಶ್, ಧನುಶ್ ಶೆಟ್ಟಿ ಪ್ರಥಮ, ಸಮೂಹ ಗೀತೆಯಲ್ಲಿ ತೇಜಸ್, ಸುಶಾಂತ್, ಸಾಹಿತ್ಯ, ಅನುಷಾ, ಜೇಷ್ಮಾ ಪ್ರಥಮ, ಮ್ಯಾಡ್ ಆಡ್ ನಲ್ಲಿ ರಿತೀಶಾ, ಸಮನ್ವಿತ್, ಉಜ್ವಲ್, ಅಶ್ವಥ್ ಪ್ರಥಮ, ಭಾವಗೀತೆಯಲ್ಲಿ ಸಿಂಚನಾ ದ್ವಿತೀಯ,ಮೊಡೆಲ್ ಪ್ರದರ್ಶನದಲ್ಲಿ ಉದಿತ್, ಶಮಿತ್ ದ್ವಿತೀಯ, ಸಮೂಹ ನೃತ್ಯದಲ್ಲಿ ಕೀರ್ತನಾ, ಸಿಂಚನಾ, ಸ್ಫೂರ್ತಿ, ಮಾನ್ಯ, ವೀಕ್ಷಾ, ಸುಶ್ಮಿತಾ, ಅನ್ವಿತ್, ಮನ್ವಿತ್ ದ್ವಿತೀಯ ಪ್ರಶಸ್ತಿಗಳನ್ನು ಹಾಗೂ 10,000 ನಗದು ಬಹುಮಾನವನ್ನು ಪಡೆದುಕೊಂಡಿದೆ.