ವೇಣೂರು: ಗ್ರಾಮ ಪಂಚಾಯತ್ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ನ.17ರಂದು ಮೂಡುಕೋಡಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಹಕಾರದೊಂದಿಗೆ ರಸ್ತೆ ಬದಿ ಬೆಳೆದಿರುವ ಗಿಡ ಪೊದರು ಕತ್ತರಿಸುವ ಕಾರ್ಯ ನಡೆಯಿತು.
ಮುಂದಿನ ದಿನದಲ್ಲಿ ಹುಲ್ಲು ಕತ್ತರಿಸುವ ಯಂತ್ರ ಬಳಸಿ ಎಲ್ಲ ರಸ್ತೆ ಬದಿ ಹುಲ್ಲನ್ನು ಕತ್ತರಿಸುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆದಿದ್ದು, ಇದರ ನೇತೃತ್ವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಾಲಿನಿ, ಒಕ್ಕೂಟದ ಅಧ್ಯಕ್ಷ ಹರೀಶ್ ಹಾಗೂ ನಳಿನಾಕ್ಷಿ, ವೇಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಹಾಗೂ ಮೂಡುಕೋಡಿ ಪಂಚಾಯತ್ ಸದಸ್ಯ ಹರೀಶ್. ಪಿ. ಎಸ್ ವಹಿಸಿದ್ದರು. ಸುಂದರ್ ಹೆಗ್ಡೆ ಉಪಹಾರದ ವ್ಯವಸ್ಥೆ ಮಾಡಿದರು.