Site icon Suddi Belthangady

ಧರ್ಮಸ್ಥಳ: ಸಹಕಾರ ಸಂಘದಲ್ಲಿ ಉಚಿತ ಇಸಿಜಿ, ಆರೋಗ್ಯ ತಪಾಸಣಾ ಶಿಬಿರ

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಧರ್ಮಸ್ಥಳ, ಶ್ರೀ ಧ. ಮ. ಮಲ್ಟಿ ಸ್ಪೆಷಲ್ ಆಸ್ಪತ್ರೆ ಉಜಿರೆ ಇದರ ಸಹಕಾರದಲ್ಲಿ ಧರ್ಮಸ್ಥಳ ಸಹಕಾರ ಸಂಘದ ಅಟಲ್ ಜೀ ಸಭಾ ಭವನದಲ್ಲಿ ಸಂಘದ ಸದಸ್ಯರಿಗೆ ಉಚಿತ ಇಸಿಜಿ, ಬಿ.ಪಿ., ಶುಗರ್, ಹೃದಯ ತಪಾಸಣಾ ಶಿಬಿರ ನ. 15 ರಂದು ಜರಗಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಉಜಿರೆ ಶ್ರೀ ಧ. ಮ. ಮಲ್ಟಿ ಸ್ಪೆಷಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ, ಡಾ. ಸಾತ್ವಿಕ್ ಜೈನ್, ಡಾ. ಧರಣೇಂದ್ರ ಜೈನ್ ಭಾಗವಹಿಸಿದ್ದರು.

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಉಮಾನಾಥ್, ಶೀನ, ನೀಲಕಂಠ ಶೆಟ್ಟಿ, ಶಾಂಭವಿ ರೈ, ಧನಲಕ್ಷ್ಮೀ ಜನಾರ್ದನ, ಪ್ರಸನ್ನ, ಚಂದ್ರಶೇಖರ, ವಿಕ್ರಮ್, ತಂಗಚ್ಚನ್, ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ ಡಿ, ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಎ. ಎಸ್. ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 194 ಸದಸ್ಯರು ಈ ಶಿಬಿರದ ಪ್ರಯೋಜನ ಪಡೆದು ಕೊಂಡರು.

Exit mobile version