Site icon Suddi Belthangady

ಉಜಿರೆ: ಎಸ್ ಡಿ ಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಪೂರ್ವಭಾವಿ ಸಭೆ

ಉಜಿರೆ: ಕಲ್ಲಾಜೆ ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಉಜಿರೆಯ  ಶ್ರೀ ಧ. ಮಂ. ಕಾಲೇಜು (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ಡಿಸೆಂಬರ್ 5 ರಿಂದ  11ರವರೆಗೆ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶಿಬಿರದ ರೂಪರೇಷೆ, ಶಿಬಿರಕ್ಕೆ ಊರಿನವರ ಮತ್ತು ಶಾಲೆಯ ವಿವಿಧ ಸಮಿತಿಗಳ ಸಹಕಾರ ಯಾವ ರೀತಿ ಇರಬೇಕು ಎಂಬ ವಿಷಯದ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಕೊಪ್ಪದ ಕೋಡಿ, ಶಾಲಾ ಮುಖ್ಯೋಪಾಧ್ಯಾಯಿನಿ ದೀಪಾ ಕಿರಣ್ ಶೆಟ್ಟಿ, ಇಂದಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ಅಡಿಲು, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಹೇಮಲತಾ, ಶಾಲಾ ಹಳೆವಿದ್ಯಾರ್ಥಿ ಕೃಷ್ಣಪ್ಪ, ಎಸ್ ಡಿ ಎಮ್ ಸಿ ಸದಸ್ಯೆ ಮೈಮುನ, ನವ ಭಾರತ್ ಗೆಳೆಯರ ಬಳಗ ಇಂದಬೆಟ್ಟು, ಕಲ್ಲಾಜೆ ಇದರ ನಿಕಟಪೂರ್ವ ಅಧ್ಯಕ್ಷ ಅಶ್ವತ್ ರಾಜ್ ಕಲ್ಲಾಜೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ  ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ.ದೀಪ ಆರ್. ಪಿ. ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version