Site icon Suddi Belthangady

ಮೊಗ್ರು: ಅಲೆಕ್ಕಿ ಜೈರಾಮ ಸೇವಾ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ, ತುಳಸಿಪೂಜೆ, ದೀಪ ಪ್ರಜ್ವಲನೆ ಕಾರ್ಯಕ್ರಮ

ಮೊಗ್ರು: ಮುಗೇರಡ್ಕ ಜೈ ಶ್ರೀ ರಾಮ ಸೇವಾ ಟ್ರಸ್ಟ್ಅಲೆಕ್ಕಿ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನ. 13ರಂದು ಶ್ರೀ ರಾಮ ಶಿಶುಮಂದಿರದಲ್ಲಿ ಮೂರನೇ ವರ್ಷದ ಗೋಪೂಜೆ, ಭಜನೆ, ತುಳಸಿ ಪೂಜೆ, ಹಣತೆಗಳ ದೀಪ ಪ್ರಜ್ವಲನೆ ಕಾರ್ಯಕ್ರಮ ನೆರವೇರಿತು. ಶ್ರೀ ರಾಮ ಶಿಶುಮಂದಿರದ ಮಕ್ಕಳು, ಪೋಷಕರು, ಮಾತಾಜಿಯವರು, ಮಾತೃ ಮಂಡಳಿ ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ- ಮುಗೇರಡ್ಕ್ ಇದರ ಸದಸ್ಯರು ಹಾಗೂ ಊರವರೆಲ್ಲಲರೂ ಸೇರಿ ಭಜನೆ, ತುಳಸಿ ಪೂಜೆ, ಗೋಪೂಜೆ, ಹಣತೆಗಳಿಗೆ ದೀಪ ಪ್ರಜ್ವಲನೆ ಜೊತೆಗೆ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಪ್ರಯೋಜಕತ್ವದಲ್ಲಿ ಅನ್ನದಾನದ ವ್ಯವಸ್ಥೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಟ್ರಸ್ಟ್ ನ ಪದಾಧಿಕಾರಿಗಳು, ಮಾತಾಜಿಯವರು, ಪೋಷಕರು, ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Exit mobile version