Site icon Suddi Belthangady

ಕೊಕ್ಕಡ: ಕಾಪಿನ ಬಾಗಿಲಿನಲ್ಲಿದ್ದ ಮುತ್ತುಸ್ವಾಮಿ ಮನೆ ತೆರವು- ಅತಂತ್ರ ಸ್ಥಿತಿಯಲ್ಲಿ ವೃದ್ಧರು – ಕಣ್ಣೀರಲ್ಲಿ ಸಾಗುತ್ತಿದೆ ಬದುಕು – ನ.14ರಂದು ಸುರಿಯುತ್ತಿರುವ ಭಾರಿ ಮಳೆಯಿಂದ ದಿಕ್ಕೇ ತೋಚದ ರೀತಿಯಲ್ಲಿ ಚಡಪಡಿಸುತ್ತಿರುವ ಕುಟುಂಬ

ಕೊಕ್ಕಡ: ಅಂಗಳದಲ್ಲಿ ಅಲ್ಲಲ್ಲಿ ಬಿದ್ದಿರುವ ಸಾಮಾನುಗಳ ರಾಶಿ. ಒಂದು ಕಡೆ ಮನೆಯೊಳಗಿದ್ದ ಪರಿಕರಗಳನ್ನು ಜೋಡಿಸಿಟ್ಟಿದ್ದಾರೆ. ಮತ್ತೊಂದೆಡೆ ಸೋಫಾ ಹಾಸಿಗೆ ಟೇಬಲ್ ಎಲ್ಲವನ್ನೂ ಕೂಡ ಅಂಗಳದಲ್ಲಿ ಇಡಲಾಗಿದೆ. ಇದರ ಜೊತೆಗೆ ನಜ್ಜು ಗುಜ್ಜಾಗಿರುವ ನೀರು ಬಿಸಿ ಮಾಡುವ ಹಂಡೆ, ನಜ್ಜು ಗುಜ್ಜಾಗಿರುವ ದೊಡ್ಡ ನೀರಿನ ಟ್ಯಾಂಕ್, ಸಂಪೂರ್ಣ ದ್ವಂಸಗೊಂಡಿರುವ ಮನೆ, ಏಕಾಏಕಿ ತೆರವುಗೊಳಿಸಿದ್ದರಿಂದ ಮನೆ ಮಂದಿ ಇಬ್ಬರು ವೃದ್ಧರು ಅತಂತ್ರ. ಕಳೆದ ಫೆಬ್ರವರಿಯಲ್ಲಿ ನಮಗೆ ದಯಾಮರಣ ಕೊಡಿ ಅಂತ ರಾಷ್ಟ್ರಪತಿಗಳಿಗೆ ಕಡಬ ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿದ್ದ ವೃದ್ಧರಾದ ಮುತ್ತುಸ್ವಾಮಿ ಮತ್ತು ರಾಧಮ್ಮ ಈಗ ಅತಂತ್ರಗೊಂಡಿದ್ದಾರೆ.

ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಒಡೆಯುವ ಸಂಧರ್ಭ ತೆಗೆದಿಟ್ಟ ಆಹಾರ ಪದಾರ್ಥಗಳು ಮರದ ಟೇಬಲ್ ಕುಳಿತುಕೊಳ್ಳುವ ಚೇರ್ ಇನ್ನಿತರ ಮನೆ ಸಾಮಾಗ್ರಿಗಳೆಲ್ಲ ಒದ್ದೆಯಾಗಿದ್ದು, ನೆನ್ನೆ ಹೇಗೋ ಟೆಂಟ್ ನಲ್ಲಿ ಕಾಲ ಕಳೆದ ವೃದ್ಧ ದಂಪತಿ ಮತ್ತು ಮಗಳು ಇಂದು ಗಾಳಿ ಮಳೆಗೆ ಹೇಗೆ ಇರುವುದು ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿ ಹೋರಾಟ ನಡೆಸುತ್ತಿರುವ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷರ ತಂಡದವರು ಇವರ ಊಟ ಉಪಚಾರ ನೋಡಿಕೊಳ್ಳುತ್ತಿದ್ದೂ ಇವರಿಗೆ ಸೂರು ಕಲ್ಪಿಸಿ ಕೊಡುವವರೆಗೆ ಹೋರಾಟ ಮುಂದುವರೆಸುವುದು ಮತ್ತು ರಾಜ್ಯ ನಾಯಕರಾದ ರವಿಕೃಷ್ಣ ರೆಡ್ಡಿ ಹೋರಾಟದಲ್ಲಿ ಭಾಗವಹಿಸುವುದಾಗಿ ಅಲ್ಲದೆ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ರೂಪಿಸುವುದಾಗಿ ತಿಳಿಸಿದ್ದಾರೆಂದು ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Exit mobile version