Site icon Suddi Belthangady

ಬೆಳ್ತಂಗಡಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮುಳಿಯ ಜ್ಯುವೆಲ್ಲರ್ಸ್ ಸನ್ಮಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡುವ ಜಿಲ್ಲಾ ಪ್ರಶಸ್ತಿಗಳಿಗೆ ಭಾಜನರಾಗಿರುವ ತಾಲೂಕಿನ ಸಾಧಕರನ್ನು ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದಯಾ ವಿಶೇಷ ಶಾಲೆಯಲ್ಲಿ ಶಾಲೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಕಳೆದ 34 ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ಸೇವೆ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ನಿರಂತರ ತೊಡಗಿಸಿಕೊಂಡ ಜಯಾನಂದ ಲಾಯಿಲ, ಕಿರಿಯ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿ 1975ರಿಂದ ಧರ್ಮಸ್ಥಳ, ಕಟೀಲು, ಪುತ್ತೂರು, ಸುಂಕದಕಟ್ಟೆ ಕದ್ರಿ, ಕುಂಟಾರು ಎಡನೀರು ಯಕ್ಷಗಾನ ಮೇಳಗಳಲ್ಲಿ ಪುಂಡು ವೇಷ, ಸ್ತ್ರೀವೇಷ, ರಾಜ, ನಾಟಕೀಯ ಸಹಿತ ವಿವಿಧ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬೆಳಾಲು ಲಕ್ಷ್ಮಣ ಗೌಡ, ಜನಪದ ಕಲಾವಿದರಾಗಿ ನಾಡಿನ ಕಲೆಯನ್ನು ಹೊರರಾಜ್ಯಗಳಲ್ಲೂ ಪ್ರದರ್ಶಿಸಿ ಸೈ ಎನಿಸಿರುವ ಜನಪದ ಕಲಾವಿದ, ಗಾಯಕ ಹಾಗೂ ಕಲಾ ತರಬೇತುದಾರ ಉದಯ ಕುಮಾರ್ ಲಾಯಿಲ, ನಿಡ್ಲೆ ಗ್ರಾಮದ ಬರೆಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಪ್ರವೃತ್ತಿಯಲ್ಲಿ ಕವಿ, ಲೇಖಕಿ ಹಾಗೂ ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡ ವಸಂತಿ ಟಿ. ನಿಡ್ಲೆಯವರನ್ನು ಅವರ ನಿವಾಸದಲ್ಲಿ ಅಭಿನಂದಿಸಿ ಸಮ್ಮಾನಿಸಲಾಯಿತು.

ಮುಳಿಯ ಶಾಖಾ ಪ್ರಬಂಧಕ ಲೋಹಿತ್ ಹಾಗೂ ಶಾಖಾ ಉಪ ಪ್ರಬಂಧಕ ದಿನೇಶ್, ಮುಳಿಯ ಜ್ಯುವೆಲ್ಲರ್ಸ್‌ನ ಸಿಬ್ಬಂದಿ ಜಯಂತ್ ಉಪಸ್ಥಿತರಿದ್ದರು.

Exit mobile version