ಬೆಳಾಲು: 1867ನೇ ಮದ್ಯ ವರ್ಜನ ಶಿಬಿರದ ಪಾನ ಮುಕ್ತ ನವಜೀವನ ಸದಸ್ಯರ ಮಾಸಿಕ ಸಭೆ ನ.10ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ನಡೆಯಿತು. ಮದ್ಯವರ್ಜನ ಶಿಬಿರದ ಒಂದು ತಿಂಗಳ ನಂತರ ಪಾನಮುಕ್ತ ಸದಸ್ಯರ ಅನು ಪಾಲನೆಗಾಗಿ ಮಾಸಿಕ ಸಭೆಯಲ್ಲಿ ಶಿಬಿರಕ್ಕೆ ಒಟ್ಟು 74 ಜನ ಸೇರಿದ್ದು, ಎಲ್ಲಾ ಸದಸ್ಯರು ಸಂಪೂರ್ಣ ಪಾನಮುಕ್ತರಾಗಿ ಅವರ ಕುಟುಂಬದವರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಿರಂತರ ಪಾನಮುಕ್ತ ಜೀವನ ನಡೆಸಲು ನೂತನ ಜೀವನ ಸಮಿತಿ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಸೂಕ್ತ ತರಬೇತಿಯನ್ನು ಉಡುಪಿ ಪ್ರಾದೇಶಿಕ ವಿಭಾಗದ ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ನೆರವೇರಿಸಿದರು. ಈ ಸಂದರ್ಭ ಒಂದು ತಿಂಗಳಲ್ಲಿ ಸಾಧನೆಗಳನ್ನು ಮಾಡಿದ ಎಲ್ಲಾ ಪಾನಮುಕ್ತ ಸದಸ್ಯರನ್ನು ಅಭಿನಂದಿಸಿದರು. ಜನಜಾಗೃತಿ ವೇದಿಕೆಯ ಆಡಳಿತ ಯೋಜನಾಧಿಕಾರಿ ಮಾಧವ ಗೌಡ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ವಹಿಸಿದ್ದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಮನೆಯ ಮಹಿಳೆಯರಿಗೆ ಸೂಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಯೋಗೇಶ್ ಗೌಡ ಬೆಳಾಲು, ಒಕ್ಕೂಟದ ಅಧ್ಯಕ್ಷ ರತ್ನಾಕರಾಚಾರ್ಯ, ಗಂಗಾಧರ್ ಸಾಲ್ಯಾನ್, ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಸುಕೇಶ್, ಉಪಾಧ್ಯಕ್ಷ ಪ್ರಸಾದ್, ಸ್ವಚ್ಛತಾ ಸೇನಾನಿ ಶ್ರೀಧರ ಪೂಜಾರಿ, ವಲಯದ ಮೇಲ್ವಿಚಾರಕಿ ವನಿತಾ, ಸೇವಾ ಪ್ರತಿನಿಧಿಗಳು ನವಜೀವನ ಸಮಿತಿ ಪೋಷಕರು, ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.