ಶಿಶಿಲ: ಅರೋಗ್ಯ ಉಪ ಕೇಂದ್ರದ ಆವರಣದಲ್ಲಿ ಹುಲ್ಲು ಹಾಗೂ ಕಳೆ ಗಿಡಗಳು ಬೆಳೆದಿದ್ದು, ಅಲ್ಲಿನ ಸಿಬ್ಬಂದಿಗಳ ಮನವಿಯoತೆ ಶೌರ್ಯ ತಂಡದ ಸದಸ್ಯರಾದ ಉಮೇಶ್ ಗೌಡ ದೇನೋಡಿ, ಶೀನಪ್ಪ ನಾಯ್ಕ್ ಮುಚ್ಚಿರಡ್ಕ, ಕೃಷ್ಣಪ್ಪ ಗೌಡ ಮುಚ್ಚಿರಡ್ಕ, ಅವಿನಾಶ್ ಭಿಡೆ, ರಾಧಾಕೃಷ್ಣ ಗುತ್ತು, ರಶ್ಮಿತಾ, ಕಿರಣ್ ಸಂಕೇಶ, ರಮೇಶ್ ಬೈರ ಕಟ್ಟ ಮುಂತಾದವರು ಅರೋಗ್ಯ ಕೇಂದ್ರದ ಅವರಣವನ್ನು ಸ್ವಚ್ಛ ಗೊಳಿಸಿ ಕೊಟ್ಟಿದ್ದಾರೆ.
ಬೆಳಗ್ಗಿನ ಉಪಹಾರ ವ್ಯವಸ್ಥೆ ರಮಾ ಗೋಖಲೆ ಹಾಗೂ ಮನೆಯವರು ನೀಡಿದ್ದು, ಶ್ರಮದಾನ ಸಂಧರ್ಭದಲ್ಲಿ ಬೆಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಪದ್ಮನಾಭ ಗೋಖಲೆ, ಯೋಜನಾಧಿಕಾರಿ ಸುರೇಂದ್ರ ಶೌರ್ಯ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರಾದ ರೂಪ, ಭಾಗೀರಥಿ ಸ್ವಯಂ ಸೇವಕರಿಗೆ ಧನ್ಯವಾದ ತಿಳಿಸಿದರು.