ಬೆಳ್ತಂಗಡಿ: ವರ್ತಕರ ಸಂಘದ ಪರವಾಗಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಇದರಿಂದ ವ್ಯಾಪಾರಿ ಸಮುದಾಯ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ತಮ್ಮ ಮನವಿಯನ್ನು ಸಲ್ಲಿಸಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕೂಡ ಈ ರಸ್ತೆ ನಿರ್ಮಾಣದಿಂದ ಎಲ್ಲರಿಗೂ ಆಗುವ ಸಮಸ್ಯೆಯಿಂದ ಅಸಮಾಧಾನವನ್ನು ವ್ಯಕ್ತ ಪಡಿಸಿದರು. ಕೂಡಲೇ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈ ಗೊಳ್ಳುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯಲು ತಮ್ಮ ಆಪ್ತ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಸಂಘದ ಮನವಿಯಲ್ಲಿ ಸರ್ವಿಸ್ ರಸ್ತೆಯನ್ನು ರದ್ದು ಪಡಿಸಿ ಉಜಿರೆಯಿಂದ ಧರ್ಮಸ್ಥಳಕ್ಕೆ 4 ಪಥದ ರಸ್ತೆ ಮಾದರಿಯಂತೆ ರಸ್ತೆ ಅಗಲ ಮಾಡಿ ಚರಂಡಿಯನ್ನು ರಸ್ತೆಯ 2 ಬದಿಯಲ್ಲಿ ಸ್ಥಳಾಂತರಿಸಲು ಮನವಿ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ ಪೈ, ಕಾರ್ಯದರ್ಶಿ ಲಾನ್ಸಿ ಪಿರೇರ, ಕಾರ್ಯಕಾರಿ ಸಮಿತಿ ಸದಸ್ಯ ಶೀತಲ್ ಜೈನ್, ವೀನ್ಸo ಟ್ ಡಿಸೋಜಾ, ಶರ್ಮಿಳಾ ಮೋರಸ್ ಉಪಸ್ಥಿತರಿದ್ದರು