Site icon Suddi Belthangady

ಮೊಗ್ರು- ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಲುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

ಮೊಗ್ರು: ತೋಟಗಾರಿಕೆ ಇಲಾಖೆ ಬೆಳ್ತಂಗಡಿ, ಬಂದಾರು ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜ ಇದರ ಸಹಭಾಗಿತ್ವದಲ್ಲಿ ತೋಟಗಾರಿಕೆ ಇಲಾಖೆ 2024-25 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಅಡಿಕೆ ಬೆಳೆ ಮತ್ತು ಕಾಳು ಮೆಣಸು ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನ. 10ರಂದು ಮುಗೇರಡ್ಕ ಮೂವರು ದೈವಸ್ಥಾನದ ವಠಾರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ವಿಟ್ಲ ಪ್ರಾದೇಶಿಕ ಕೇಂದ್ರ ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳಾದ ಡಾ.ಭವಿಷ್ಯ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಹಾಗೂ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹಾವೀರ ಇಲಾಖೆಯ ಯೋಜನೆಗಳ ಸಮಗ್ರ ಮಾಹಿತಿ ನೀಡಿ ಸಂಧರ್ಭೋಚಿತವಾಗಿ ಮಾತನಾಡಿದರು. ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪುಷ್ಪವತಿ ಬರಮೇಲು, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ, ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೊಕ್ತೇಸರ ರಾಮ್ಮಣ್ಣ ಗೌಡ ದೇವಸ, ಮನೋಹರ ಗೌಡ ಅಂತರ, ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕ ಶೀಲಾವತಿ ಬಾಬು ಗೌಡ, ಬೆಳ್ತಂಗಡಿ ತೋಟಗಾರಿಕೆ ಇಲಾಖಾ ಸಹಾಯಕ ಅಧಿಕಾರಿಗಳಾದ ಮಲ್ಲಿನಾಥ ಬಿರಾದಾರ್, ಭೀಮರಾಯ ಸೊಡ್ಡಗಿ ಉಪಸ್ಥಿತರಿದ್ದರು.
ಹೆಚ್ಚಿನ ರೈತರು ತರಬೇತಿ ಶಿಬಿರ ಮಾಹಿತಿ ಪಡೆದುಕೊಂಡರು.

ವಕೀಲರಾದ ಉದಯ ಬಿ ಕೆ ಇವರು ಸಹಕರಿಸಿದರು. ಬಂದಾರು ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಂದಾರು ಪಂಚಾಯತ್ ಸದಸ್ಯ ಗಂಗಾಧರ ಪೂಜಾರಿ ಧನ್ಯವಾದವಿತ್ತರು.

Exit mobile version