Site icon Suddi Belthangady

ಬೆಳ್ತಂಗಡಿ: ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆ ಬೆಳ್ತಂಗಡಿಯಲ್ಲಿ ಶುಭಾರಂಭ

ಬೆಳ್ತಂಗಡಿ:1994ರಲ್ಲಿ ಪ್ರಾರಂಭಗೊಂಡ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ 13ನೇ ಶಾಖೆಯು ಬೆಳ್ತಂಗಡಿಯ ಹನುಮಾನ್ ಕಾಂಪ್ಲೆಕ್ಸ್, ಬಾಳಿಗ ಕಟ್ಟಡದ ಒಂದನೇ ಮಹಡಿಯಲ್ಲಿ ನ.8 ರಂದು ಉದ್ಘಾಟನೆಗೊಂಡಿದೆ. ಉದ್ಘಾಟನೆಯನ್ನು ಶಾರದಾ ಟ್ರೇಡರ್ಸ್ ಮಾಲಿಕೆ ರಮೇಶ್ ಭಟ್ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಿಇಒ ಅಮೋಘ ಜೆ.ರೈ, ಡಿಜಿಎಮ್ ಶ್ರೀವತ್ಸರಾಜ, ರಿಜಿನಲ್ ಮ್ಯಾನೇಜರ್ ಉದಯ್ ಶ್ಯಾಮ್, ಬ್ರಾಂಚ್ ಮ್ಯಾನೇಜರ್ ಪ್ರದೀಪ್ ಬಂಗೇರ, ಚಾರ್ಟೆಡ್ ಅಕೌಂಟೆಂಟ್ ಹೇಮಂತ್ ಪೈ, ಬೆಳ್ತಂಗಡಿ ಹನುಮಾನ್ ಕಾಂಪ್ಲೆಕ್ಸ್ ಮಾಲಿಕ ಯಶವಂತ್ ಬಾಳಿಗ, ತಾ.ಪಂ ಮಾಜಿ ಸದಸ್ಯರು ಶಶಿಧರ ಕಲ್ಮಂಜ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಕೀಲ ಪ್ರಶಾಂತ್, ಪುತ್ತೂರು ಬ್ರಾಂಚ್ ಮ್ಯಾನೇಜರ್ ಶಿವಕುಮಾರ್, ಸಂಜೀವ ಎ, ಶ್ರೀ ರಾಮ್ ಫೈನಾನ್ಸ್ ಮ್ಯಾನೇಜರ್ ಸುಭಾಷ್ ಪುದ್ದರಬೈಲು, ಪ್ರಮೋದ್ ಬಂಗೇರ ನೆರಿಯ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಪ್ರಸ್ತುತ ಪುತ್ತೂರು, ಮಂಗಳೂರು, ಮೂಡಬಿದ್ರಿ ,ಮಡಿಕೇರಿ, ಮೈಸೂರು, ಸಕಲೇಶಪುರ, ಶಿರಸಿ, ಚಿಕ್ಕಮಂಗಳೂರು ,ಹಾವೇರಿ ,ಶಿವಮೊಗ್ಗ ,ದಾವಣಗೆರೆ ಮತ್ತು ಸಾಗರದಲ್ಲಿ ಶಾಖೆಗಳನ್ನು ಹೊಂದಿದೆ.
ಅತೀ ಶೀಘ್ರದಲ್ಲಿ ಕುಂದಾಪುರ,ಧಾರವಾಡ ಹಾಗೂ ಹುಣಸೂರಿನಲ್ಲಿ ಶಾಖೆಗಳು ಪ್ರಾರಂಭಗೊಳ್ಳಲಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ಆರಂಭಿಸಲು ಗುರಿಯನ್ನು ಹೊಂದಿದೆ.
2024 -25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ವಹಿವಾಟನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಸಂಸ್ಥೆಯಲ್ಲಿ ಹೊಸ ಮತ್ತು ಹಳೆಯ ವಾಹನಗಳ ಮೇಲೆ ಹಾಗೂ ಖರೀದಿಸಲು ಸಾಲ ಸೌಲಭ್ಯ , ಭೂ ಅಡಮಾನ ಸಾಲಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ಅತೀ ಶೀಘ್ರವಾಗಿ ಗ್ರಾಹಕರಿಗೆ ನೀಡುವ ಸಂಸ್ಥೆಯಾಗಿದೆ.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಚಿನ್ನ ಅಡಮಾನ ಸಾಲ, ವ್ಯಾಪಾರಾಭಿವೃದ್ಧಿ ಸಾಲವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಲಿದೆ. ಇದು ಬಿಂದು ಮಿನರಲ್ ವಾಟರ್, ಬಿಂದು ಜೀರಾಮಸಾಲಾ, ಸಿಪ್ಪಾನ್ ಸೇರಿದಂತೆ 50ಕ್ಕೂ ಅಧಿಕ ಪಾನೀಯ ಮತ್ತು ಸ್ನಾಕ್ಅಪ್ ತಿನಿಸುಗಳ ತಯಾರಕರಾದ ಪ್ರತಿಷ್ಠಿತ SG ಗ್ರೂಪ್ ನ ಸಹ ಸಂಸ್ಥೆಯಾಗಿರುವುದು.

Exit mobile version