ವೇಣೂರು: ಎಸ್.ಎಂ.ಎ. ವೇಣೂರು ರೀಜನಲ್ ವಾರ್ಷಿಕ ಮಹಾಸಭೆಯು ರೀಜನಲ್ ಅಧ್ಯಕ್ಷ ಕೆ. ವೈ. ಇಸ್ಮಾಯಿಲ್ ಕುಂಡದಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಕುಂಡದಬೆಟ್ಟು ಮದ್ರಸ ಹಾಲ್ ನಲ್ಲಿ ನ.6ರಂದು ನಡೆಯಿತು. ಝೋನಲ್ ಅಧ್ಯಕ್ಷ ಯಾಕುಬ್ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ನಾಯಕರಾದ ಇಸ್ಮಾಯಿಲ್, ಮುತ್ತಲಿಬ್, ಝೋನಲ್ ನಾಯಕರಾದ ಮುಹಮ್ಮದ್ ಫಾಳಿಲ್ ಕಾಮಿಲ್ ಸಖಾಫಿ ಉಪಸ್ಥಿತರಿದ್ದರು. ವೀಕ್ಷಕರಾದ ಹಮೀದ್ ಮುಸ್ಲಿಯಾರ್ ನಾಯಕತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿ ಹನೀಫ್ ಸಖಾಫಿ ಸ್ವಾಗತಿಸಿ, ಮೂರು ವರ್ಷದ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು.
2024-27ರ ನೂತನ ಸಮಿತಿ ಅಧ್ಯಕ್ಷರಾಗಿ ಬದ್ರುದ್ದೀನ್ ಲತ್ವೀಫಿ ಗೋಳಿಯಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಸಖಾಫಿ ಬಾರೆ ಬೆಟ್ಟು (ಮುದರ್ರಿಸ್ BJM ಹುಣ್ಸೆಪಲ್ಕೆ), ಕೋಶಾಧಿಕಾರಿಯಾಗಿ ಉಸ್ಮಾನ್ ನಡ್ಯಳಿಕೆ, ಕುಂಡದಬೆಟ್ಟು, ಉಪಾಧ್ಯಕ್ಷರುಗಳಾಗಿ ಅಬ್ಬಾಸ್ ಹಾಜಿ ಉಲ್ತೂರು, ಹನೀಫ್ ಸಖಾಫಿ ಕುಂಡದಬೆಟ್ಟು, ಮುಹಮ್ಮದ್ GK ಪಿಲ್ಯ, ಕಾರ್ಯದರ್ಶಿಗಳಾಗಿ ಅಬ್ಬಾಸ್ ಹುಣ್ಸೆಪಲ್ಕೆ, ಸ್ವದಖತುಲ್ಲಾ ಸಅದಿ ಶಾಂತಿನಗರ, ಇಸ್ಮಾಯಿಲ್ ಗರ್ಡಾಡಿ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಸಖಾಫಿ ಧನ್ಯವಾದ ಸಲ್ಲಿಸಿದರು.