Site icon Suddi Belthangady

ಬೆಳ್ತಂಗಡಿ: ವಕೀಲರ ಸಂಘದಿಂದ ದೀಪಾವಳಿ ಹಬ್ಬ ಆಚರಣೆ

ಬೆಳ್ತಂಗಡಿ: ವಕೀಲರ ಸಂಘದಿಂದ ವಕೀಲರ ಭವನದಲ್ಲಿ ದೀಪಾವಳಿ ಆಚರಣೆ ನ.6ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿ. ಕೆ. ದೀಪಾವಳಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಬೆಳ್ತಂಗಡಿ ವಕೀಲರ ಸಂಘದ ಸದಸ್ಯ, ನ್ಯಾಯವಾದಿ ಶ್ರೀಕೃಷ್ಣ ಶೆಣೈ ಬಹಳ ಅರ್ಥವತ್ತಾಗಿ ವಿವರಿಸಿದರು. ಅಧ್ಯಕ್ಷೀಯ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮಾತನಾಡಿದರು.

ನೆರೆದಿದ್ದ ಎಲ್ಲರನ್ನು ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ. ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ ಹಾಗೂ ಕೋಶಾಧಿಕಾರಿ ಪ್ರಶಾಂತ್ ಎಂ. ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವೈವಾಹಿಕ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಬಿ. ಕೆ. ಧನಂಜಯ ರಾವ್ ಹಾಗೂ ರಾಜರ್ಷಿ ದಂಪತಿಗಳನ್ನು ಗೌರವಿಸಲಾಯಿತು. ಹಿರಿಯ ವಕೀಲ ಬಿ. ಕೆ. ಧನಂಜಯ ರಾವ್ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರತೀಕ್ಷಾ ಹಾಗೂ ಸಮೂಹ ಗಾಯನವನ್ನು ಅಕ್ಷಯ್ ಕುಮಾರ್ ಮತ್ತು ಉಷಾ ಎನ್. ಜಿ. ತಂಡದವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಡಿ. ಧನಂಜಯ ಕುಮಾರ್ ಧನ್ಯವಾದಗಳನ್ನು ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಕೀಲ ಹರ್ಷಿತ್ ಕುಮಾರ್ ಹಾಗೂ ಸಂಧ್ಯಾ ನಿರೂಪಿಸಿದರು.

Exit mobile version