ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ಆಶಾದೀಪ ಸೆಮಿನರಿಯ ನಿರ್ದೇಶಕ ವಂ. ಸ್ವಾ. ಜೆರಾಲ್ಡ್ ಪ್ರಕಾಶ್ ಡಿ’ಸೋಜಾ ಧ್ವಜಾರೋಹಣವನ್ನು ನೆರವೇರಿಸಿದರು. ವಿದ್ಯಾರ್ಥಿನಿ ನಿದ ಫಾತಿಮಾ ಕನ್ನಡ ರಾಜ್ಯೋತ್ಸವದ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು. ವಿದ್ಯಾರ್ಥಿಗಳು ಗೀತ ಗಾಯನ ಮತ್ತು ನೃತ್ಯದ ಮೂಲಕ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಿದರು.
ಆಶಾದೀಪ ಸೆಮಿನರಿಯ ನಿರ್ದೇಶಕ ವಂ. ಸ್ವಾ. ಜೆರಾಲ್ಡ್ ಪ್ರಕಾಶ್ ಡಿ’ಸೋಜಾ ಮಕ್ಕಳನ್ನು ಉದ್ದೇಶಿಸಿ ಮತಾನಾಡಿ, ಕರ್ನಾಟಕವು ಒಂದು ಶ್ರೀಮಂತ ರಾಷ್ಟ್ರ, ಸರ್ವಜನಾಂಗದ ಶಾಂತಿಯ ತೋಟ ನಮ್ಮ ನಾಡು ಎಂದು ಹೇಳಿ , ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಪ್ರಾಪ್ತಿ ನಿರೂಪಿಸಿ, ಅದ್ವಿತ ಸ್ವಾಗತಿಸಿ, ಸುಭೀಕ್ಷ ಧನ್ಯವಾದವನ್ನು ಸಮರ್ಪಿಸಿದರು. ನಂತರ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.