Site icon Suddi Belthangady

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಅಸ್ವಸ್ಥರಾದ ಸಂತೆಕಟ್ಟೆಯ ಹೂವಿನ ವ್ಯಾಪಾರಿ ಶಿವರಾಮ್ ನಿವಾಸದಲ್ಲಿ ಬೆಳ್ತಂಗಡಿ ವರ್ತಕರ ಸಂಘದಿಂದ ದೀಪಾವಳಿ ಆಚರಣೆ- ಆರ್ಥಿಕ ನೆರವು

ಬೆಳ್ತಂಗಡಿ: ದೇವರನ್ನು ನಾವು ಹೇಗೆ ಧನ್ಯಾತ ಭಾವದಿಂದ ಕಾಣುತ್ತೇವೆ ಹಾಗೇಯೆ ಪರರನ್ನು ಹಾಗೂ ಸಂಕಷ್ಟದಲ್ಲಿರುವರನ್ನು ಪ್ರೀತಿ ಮನೋಭಾವದಿಂದ ಕಾಣಬೇಕು. ಭಗವಂತನು ನಮಗೆ ನೀಡಿದ ಸಂಪತ್ತಿನ ಒಂದು ಭಾಗವನ್ನು ಸಂಕಷ್ಟದಲ್ಲಿರುವವರೆಗೆ ಸಹಾಯ ಮಾಡಿದರೆ ದೇವರು ನಾವು ಮಾಡುವ ಕಾರ್ಯಕ್ಕೆ ಅನುಗ್ರಹಿಸುತ್ತಾನೆ, ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ ಎಂದು ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ ಹೇಳಿದರು. ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಅಸ್ವಸ್ಥರಾದ ಸಂತೆಕಟ್ಟೆಯ ಹೂವಿನ ವ್ಯಾಪಾರಿ ಶಿವರಾಮ್ ರವರ ಮನೆಯಲ್ಲಿ ನಡೆದ ಬೆಳ್ತಂಗಡಿ ವರ್ತಕರ ಸಂಘದ ದೀಪಾವಳಿ ಆಚರಣೆಯ ಆರ್ಥಿಕ ನೆರವು ಹಸ್ತಾಂತರ ಸಂದರ್ಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಉಪಾಧ್ಯಕ್ಷ ಶಶಿಧರ್ ಪೈ, ಕಾರ್ಯದರ್ಶಿ ಲಾನ್ಸಿ ಪಿರೇರ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿನ್ಸೆಂಟ್ ಡಿಸೋಜಾ, ಶೀತಲ್ ಜೈನ್ , ಅಶೋಕ್ ಶೆಟ್ಟಿ ಹಾಗೂ ಶರ್ಮಿಳಾ ಮೋರಸ್ ಉಪಸ್ಥಿತರಿದ್ದರು. ಶಿವರಾಮ್ ರವರ ನಿವಾಸದಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಯನ್ನು ಸಿಹಿ ತಿಂಡಿ ನೀಡಿ ಹಾಗೂ ಸಂಘದ ವತಿಯಿಂದ ಆರ್ಥಿಕ ಸಹಾಯ ಹಸ್ತಾಂತರಿಸಿದರು.

Exit mobile version