ಬೆಳ್ತಂಗಡಿ: ತಾಲೂಕು ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ ಮುಂಡತ್ತೊಡಿ ಶಾಲೆಯಲ್ಲಿ ನಡೆಸಲಾಯಿತು.
ಮುಂಡತ್ತೊಡಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸೇವಂತಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಾಹಿತಿಗಳು ದೊರೆಯುತ್ತಿದ್ದು ಮಲ್ಲಿಗೆ ಕೃಷಿ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.
ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ಅವರು ಕೇಂದ್ರದ ಸದಸ್ಯರಿಗೆ ಮಲ್ಲಿಗೆ ಗಿಡಗಳನ್ನು ಉಚಿತವಾಗಿ ನೀಡಿ, ಮಾಹಿತಿಯನ್ನು ನೀಡಿ, ಸ್ವಉದ್ಯೋಗ ಮಾಡಲು ಪ್ರೇರಣೆಯನ್ನು ನೀಡುತ್ತಿದ್ದು, ಗಿಡ ನಾಟಿ ಮಾಡಿ, ಬೆಳೆಸಿ ಉತ್ತಮ ಆದಾಯ ಗಳಿಸುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾದ ಸಿದ್ದವನ ನರ್ಸರಿಯ ಯೋಜನಾಧಿಕಾರಿ ದಯಾನಂದ ಅವರು ಗಿಡದ ಆಯ್ಕೆ ಮಾಡುವ ಕ್ರಮ, ಘೋಷಣೆಯ ಬಗ್ಗೆ, ಸ್ಥಳದ ಅವಕಾಶ ಇದ್ದಲ್ಲಿ ನೆಲದಲ್ಲಿ ನಾಟಿ ಮಾಡುವ ಬಗ್ಗೆ, ಸ್ಥಳಾವಕಾಶ ಇಲ್ಲದೇ ಇದ್ದಲ್ಲಿ ಗ್ರೋ ಬ್ಯಾಗ್ ನಲ್ಲಿ ಗಿಡವನ್ನು ನಾಟಿ ಮಾಡುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಅಧ್ಯಕ್ಷೆ ಶೀಲಾವತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪ್ರೇಮಾ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ವನಿತಾ ಧನ್ಯವಾದವಿತ್ತರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾವಸಂತ್ ಕಾರ್ಯಕ್ರಮ ನಿರೂಪಿಸಿದರು.