ಮಡಂತ್ಯಾರು: ಜೆಸಿಐ ಮಡಂತ್ಯಾರು ವಿಜಯ 2024ರ ಜೇಸಿ ಸಪ್ತಾಹವು ಅ.13ರಿಂದ 19ರವರೆಗೆ ಕೊರೆಯ ಕಂಪೌಂಡ್ ಮಡಂತ್ಯಾರು ಇಲ್ಲಿ ಜೆಸಿ ವಿಕೇಶ್ ಮಾನ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ದಿ. ಕೃಷ್ಣಪ್ಪ ಪೂಜಾರಿ ಮಾನ್ಯ ಸಭಾವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಪೇಜಾವರ ಶ್ರೀಧರ ಭಟ್ ದಿವ್ಯ ಹಸ್ತದಲ್ಲಿ ನೆರವೇರಿಸಲಾಯಿತು.
ನಂತರ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಪ್ತಾಹ ಆಯೋಜಿಸಲಾಯಿತು.. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಡಾ. ಎಂ. ಮೋಹನ ಆಳ್ವ, JCI sen ಸಂಪತ್ ಬಿ. ಸುವರ್ಣ, ಶಶಿಧರ್ ಶೆಟ್ಟಿ ಬರೋಡ, ಅಲೆಕ್ಸ್ ಐವನ್ ಸಿಕ್ವೇರಾ, ರೆ.ಸ್ವಾಮಿ. ಸ್ಟ್ಯಾನಿ ಗೋವಿಯಸ್,ತಹಶೀಲ್ದಾರ್ ಪೃಥ್ವಿ ಸಾನಿಕಂ, ವಲಯಾಧ್ಯಕ್ಷ JCI Sen Adv ಗಿರೀಶ್ ಎಸ್. ಪಿ., ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಯೋಗೀಶ್ ಪೂಜಾರಿ ಕಡ್ತಿಲ, ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ JCI PPP ಸೌಜನ್ಯ ಹೆಗ್ಡೆ, ಪ್ರಖ್ಯಾತ ಭಾಗವತೆ ಕಾವ್ಯಶ್ರೀ ಗುರುಪ್ರಸಾದ್ ನಾಯಕ್, ಪಿಡಿಜಿ ಪ್ರಕಾಶ್ ಕಾರಂತ್, ಗಂಗಾಧರ್ ಇ ಮಂಡಗಲೆ ಹೀಗೆ ಹಲವು ಗಣ್ಯರ ಉಪಸ್ಥಿಯಲ್ಲಿ ವಿಜೃಂಭಣೆಯಿಂದ ಜರುಗಿತು.
ಏಳು ದಿನಗಳ ವಿಶೇಷ ಮನರಂಜನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವರ್ಷದ ಅತ್ಯುತ್ತಮ ಪ್ರಶಸ್ತಿ ಜೇಸಿ ಸಪ್ತಾಹ ವಿಜಯ 2024 ಪುರಸ್ಕಾರವನ್ನು ಬದುಕು ಕಟ್ಟೋಣ ಬನ್ನಿ ಇದರ ಸ್ಥಾಪಕ, ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್ ಇವರಿಗೆ ನೀಡಿ ಗೌರವಿಸಲಾಯಿತು ಹಾಗೂ ಪದ್ಮ ಶ್ರೀ ಪುರಸ್ಕೃತರಾದ ಶ್ರೀ ಹರೆಕ್ಕಳ ಹಾಜಬ್ಬ ರವರನ್ನು ಜೇಸಿ ವಿಜಯ 2024 ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಮಯದಲ್ಲಿ ಮಡಂತ್ಯಾರು ಘಟಕವನ್ನು ಕಟ್ಟಿ ಬೆಳೆಸಿದ 32 ಪೂರ್ವಾಧ್ಯಕ್ಷರುಗಳ ಸಂಪೂರ್ಣ ಸಹಕಾರ, 2023 ರ ಅಧ್ಯಕ್ಷ ಜೇಸಿ ಅಶೋಕ್ ಗುಂಡಿಯಲ್ಕೆ, ಸಪ್ತಾಹ ಸಂಯೋಜಕ ಜೇಸಿ ಯತೀಶ್ ರೈ ಹಾಗೂ ಈ ವರ್ಷದ ಕಾರ್ಯದರ್ಶಿ ಜೇಸಿ ಸಂಯುಕ್ತ ಪೂಜಾರಿಯವರ ಸರ್ವ ರೀತಿಯ ಸಹಕಾರದೊಂದಿಗೆ ಸಪ್ತಾಹ ಯಶಸ್ವಿಯಾಗಿ ಸುಸಂಪನ್ನವಾಯಿತು.