Site icon Suddi Belthangady

ಬೆಳ್ತಂಗಡಿ: ಕೆ.ಹರೀಶ್ ಕುಮಾರ್ ರಿಂದ 50 ಲಕ್ಷ ರೂಪಾಯಿ ವಿಶೇಷ ಅನುದಾನದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ಮಾಜಿ ವಿಧಾನ ಪರಿಷತ್ ಶಾಸಕರೂ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ.ಹರೀಶ್ ಕುಮಾರ್ ಮುತುವರ್ಜಿಯಿಂದ ಸರಕಾರದ ವಿಶೇಷ 50 ಲಕ್ಷ ರೂಪಾಯಿ ಅನುದಾನದ ಕಳಿಯ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಗೇರುಕಟ್ಟೆ – ಹೇರೊಡಿ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಹರೀಶ್ ಕುಮಾರ್, ಲತೀಫ್ ಪರಿಮ, ಮರೀಟಾ ಪಿಂಟೋ, ಮೋಹಿನಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಪೂಜಾರಿ, ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಘವ ಎಚ್., ನಿವೃತ್ತ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ಕೇಶವತಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತುಕರಾಮ ಪೂಜಾರಿ, ದಿನೇಶ್ ಓಡಿಲ್ನಾಳ, ಅಬ್ದುಲ್ ರಹಿಮಾನ್ ಸಿಟಿಲ್ಯಾಂಡ್, ಸದಾನಂದ ಶೆಟ್ಟಿ, ಶರೀಫ್ ಮದ್ದಡ್ಕ, ಶ್ರೀನಿವಾಸ ಬೆರ್ಕೆತ್ತೋಡಿ, ಲಿಂಗಪ್ಪ ಶೆಟ್ಟಿಗಾರ, ಚಂದ್ರಪ್ರಕಾಶ್ ಶೆಟ್ಟಿ,ಹ ಮೀದ್ ಜಿ. ಡಿ., ಸಿದ್ದೀಕ್ ಜಿ.ಎಚ್., ಹಕೀಮ್ ಗೋವಿಂದೂರ್, ಹನೀಫ್ ಕೆ. ಎಮ್. ಹಾಜರಿದ್ದರು.

Exit mobile version