Site icon Suddi Belthangady

ಬೆಳ್ತಂಗಡಿ: ಕಾಂಗ್ರೆಸ್ ಸರಕಾರದ ಮುಸ್ಲಿಂ ಸಮುದಾಯದ ಒಲೈಕೆಯಿಂದ ರೈತರು ಆತ್ಮಹತ್ಯೆ ಸ್ಥಿತಿ: ಹರೀಶ್ ಪೂಂಜ ಪತ್ರಿಕಾ ಗೋಷ್ಠಿ

ಬೆಳ್ತಂಗಡಿ: 1974 ರಲ್ಲಿ ಗುಪ್ತವಾಗಿ ಮಾಡಿದ ನೋಟಿಪೀಕೇಶನ್ ಮತ್ತು ಈಗಿನ ಕಾಂಗ್ರೆಸ್ ಸರಕಾರ ಅತಿಯಾಗಿ ಒಂದು ಸಮುದಾಯ ಅಂದರೆ ಮುಸ್ಲಿಂ ಸಮುದಾಯವನ್ನು ಒಲೈಕೆ ಮಾಡಲು ಹೊರಟದ ಪರಿಣಾಮ ಸಾವಿರಾರು ರೈತರ ಕೃಷಿ ಜಮೀನು ವಕ್ಫ್ ಅಸ್ತಿಯಾಗುತ್ತಿದ್ದು, ಇದರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ನ. 3ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಿನ ಸರಕಾರ ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡುವ ನೆಪದಲ್ಲಿ ಆಡಳಿತಕ್ಕೆ ಬಂದಿದ್ದು ಈಗ ಜನರಿಗೆ ಸರಿಯಾಗಿ ಗ್ಯಾರಂಟಿ ಯೋಜನೆ ನೀಡದೆ ಜನರನ್ನು ಮೋಸಮಾಡುತ್ತಿದೆ. ಸರಕಾರ ಆರ್ಥಿಕ ದೀವಾಳಿಯಲ್ಲಿದ್ದು ಮಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ. ರಸ್ತೆ ಅಭಿವೃದ್ದಿಗೆ ಹಣವಿಲ್ಲ. ಅಂಗವಿಕಲರ ಅನುದಾನ ಬರುತ್ತಿಲ್ಲ. ಸರಕಾರಿ ಶಾಲಾ ಕಟ್ಟಡ ಹಾನಿಗೂ ಹಣ ನೀಡುತ್ತಿಲ್ಲ. ಇದೀಗ ವಕ್ಪ್ ಆಸ್ತಿ ಗೊಂದಲದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು.

ಮೂಡ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಅನುದಾನ ದುರುಪಯೋಗ ಇನ್ನಿತರ ಹಗರಣಗಳಿಂದ ಕಾಂಗ್ರೆಸ್ ಸರಕಾರ ಜನರ ಮುಂದೆ ನಿಲ್ಲಲು ಭಯ ಪಡುತ್ತಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 1500 ವರ್ಷ ಇತಿಹಾಸದ ದೇವಸ್ಥಾನದ ಆಸ್ತಿ ವಕ್ಪ್ ಎಂದು ಆರ್ ಟಿ ಸಿ ಯಲ್ಲಿ ಬಂದಿದೆ. ಸಚಿವ ಎಮ್. ಬಿ. ಪಾಟೀಲ್ ರವರ ಕ್ಷೇತ್ರದಲ್ಲಿ ಇಡೀ ಗ್ರಾಮವೇ ವಕ್ಪ್ ಆಸ್ತಿ ಎಂದು ಬರುತ್ತಿದೆ. ದ.ಕ ಜಿಲ್ಲೆಯಲ್ಲಿ ಕೂಡ ವಕ್ಪ್ ಆಸ್ತಿ ಬಂದ ಬಗ್ಗೆ ಮಾಹಿತಿ ಬಂದಿದೆ. ಒಟ್ಟಾಗಿ ಜನ ಭಯ ಭೀತರಾಗಿದ್ದಾರೆ. ಜನ ಎಚ್ಚೆತ್ತುಕೊಳ್ಳಬೇಕು. ಬಿ ಜೆ ಪಿ ಈ ಬಗ್ಗೆ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಮಾಹಿತಿ ಕಲೆಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಈ ಷಡ್ಯಂತ್ರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಶ್ರೀನಿವಾಸ್ ರಾವ್, ಪ್ರದಾನ ಕಾರ್ಯ ದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.

Exit mobile version