ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವ ಸಂದರ್ಭ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಗಳಿಗೆ ಬೆಳ್ತಂಗಡಿ ತಾಲೂಕಿನ ನಾಲ್ವರು ಸಾಧಕರು ಹಾಗೂ ಎರಡು ಸಂಘ ಸಂಸ್ಥೆಗಳು ಆಯ್ಕೆಯಾಗಿವೆ.
2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 55 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪೈಕಿ ಬೆಳ್ತಂಗಡಿ ತಾಲೂಕಿನಿಂದ ಲಾಯಿಲ ಪುತ್ರಬೈಲಿನ ಉದಯ ಕುಮಾರ್ ಲಾಯಿಲ(ಸುಗಮ ಸಂಗೀತ), ವಸಂತಿ ಟಿ. ನಿಡ್ಲೆ (ಕವಯತ್ರಿ), ಲಾಯಿಲದ ಜಯಾನಂದ (ಸಮಾಜ ಸೇವೆ), ಬೆಳಾಲಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ (ಕಲಾಕ್ಷೇತ್ರ) ಸ್ಥಾನ ಪಡೆದಿದ್ದಾರೆ.
ಜಿಲ್ಲಾಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ 19 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನಿಂದ ಪ್ರಶಸ್ತಿಗೆ ಬೆಳ್ತಂಗಡಿಯ ದಯಾ ವಿಶೇಷ ಶಾಲೆ (ಸಮಾಜ ಸೇವೆ), ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಮಿತಿ (ಸಮಾಜ ಸೇವೆ) ಆಯ್ಕೆಯಾಗಿವೆ.