ಬೆಳ್ತಂಗಡಿ: ಜೆಸಿಐ ಭಾರತದ ವಲಯ-15ರ 2025 ನೇ ಸಾಲಿನ ನೂತನ ವಲಯ ಉಪಾಧ್ಯಕ್ಷರಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ, ಮೈಟ್ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ರಂಜಿತ್ ಹೆಚ್.ಡಿ. ಬಳಂಜ ಆಯ್ಕೆಯಾದರು.
ಕಾಪುವಿನಲ್ಲಿ ನಡೆದ ವಲಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನ ಆಡಳಿತ ಮಂಡಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಈ ವರ್ಷ ಕಾರ್ಯಕ್ರಮಗಳ ಆಯೋಜನೆ ಮೂಲಕ ವಲಯದಲ್ಲಿಯೇ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ರಂಜಿತ್ ತನ್ನದಾಗಿಸಿಕೊಂಡಿದ್ದರು. ಆದ್ದರಿಂದ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ರಂಜಿತ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವಲಯಧ್ಯಕ್ಷ ಅಡ್ವಾಕೇಟ್ ಗಿರೀಶ್ ಎಸ್ ಪಿ, ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಜೆಸಿಐ ಭಾರತದ ಪೂರ್ವ ಉಪಾಧ್ಯಕ್ಷ ರಾಜೇಶ್ ಕುಮಾರ್ ಶರಾಫ್, ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಚುನಾವಣಾ ಅಧಿಕಾರಿಯಾಗಿ ನಿಕಟಪೂರ್ವ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಪೂರ್ವ ವಲಯ ಅಧ್ಯಕ್ಷರುಗಳಾದ ಪುರಂದರ್ ರೈ, ವೈ ಸುಕುಮಾರ್, ಅನಿಲ್ ಕುಮಾರ್, ಮುರಳಿ ಶ್ಯಾಮ್, ಸಂಪತ್ ಬಿ ಸುವರ್ಣ, ಅಲೆನ್ ರೋಹನ್ ವಾಜ್, ಶೀಧರ್ ಪಿ ಎಸ್, ಕೃಷ್ಣ ಮೋಹನ್ ಪಿ ಎಸ್, ಸಂದೀಪ್ ಕುಮಾರ್, ಸಂತೋಷ್ ಜಿ, ರಾಕೇಶ್ ಕುಂಜೂರು, ಅಶೋಕ್ ಚುಂತೂರ್, ಸೌಜನ್ಯ ಹೆಗ್ಡೆ, ರಾಯನ್ ಉದಯ್ ಕ್ರಾಸ್ತಾ ಉಪಸ್ಥಿತರಿದ್ದರು.
2025ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಷ್ ಪಿ ಏ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.