Site icon Suddi Belthangady

ಮೂರುಗೋಳಿ: ಎಟಿಎಂ ನಿಂದ ದರೋಡೆಗೆ ಯತ್ನ

ಬೆಳ್ತಂಗಡಿ : ಎಸ್‌ಬಿಎಂ ಎಂಬ ಖಾಸಗಿ ಬ್ಯಾಂಕಿನ ಎಟಿಎಂ ಒಡೆದು ಲಕ್ಷಾಂತರ ಹಣ ದೋಚಲು ವಿಫಲ ಯತ್ನ ನಡೆಸಿದ ಘಟನೆ ಅ.28ರಂದು ತಡ ರಾತ್ರಿ ಬಾರ್ಯ ಗ್ರಾಮದ ಮೂರುಗೋಳಿ ಪೇಟೆಯಲ್ಲಿ ನಡೆದಿದೆ.

ಮೂರುಗೋಳಿ ಜಂಕ್ಷನ್ ಬಳಿ ಇರುವ ಖಾಸಗಿ ಬ್ಯಾಂಕ್‌ನ ಎಟಿಎಂ ಒಡೆದು ಹಣ ದರೋಡೆಗೆ ಯತ್ನಿಸಿ ಕಳ್ಳ ವಿಫಲನಾಗಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸಂಬಂಧಪಟ್ಟವರಿಂದ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.

Exit mobile version