ಬೆಳ್ತಂಗಡಿ: ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ವಿಶೇಷ ಕಾರ್ಯಕ್ರಮದ 6ನೇ ನೇರಪ್ರಸಾರ ಅ.21ರಂದು ಸಂಜೆ ಸುದ್ದಿ ನ್ಯೂಸ್ ಬೆಳ್ತಂಗಡಿ ಸ್ಟುಡಿಯೋದಲ್ಲಿ ನಡೆಯಿತು.
ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಪ್ರಮುಖ ಘಟನೆಗಳ ವಿಶ್ಲೇಷಣೆ ನಡೆಸಿದರು. ಪ್ರಧಾನ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಧಾನ ಪರಿಷತ್ ಉಪಚುನಾವಣೆ, ಕಳೆದ 12 ವರ್ಷಗಳಲ್ಲಿ ಈ ಬಾರಿಯೇ ಇಷ್ಟೊಂದು ಮಳೆ-ಕಳೆದ ಒಂದು ದಶಕದಲ್ಲೇ ಭಾರೀ ಮಳೆ-ಜಿಲ್ಲೆಯಲ್ಲಿ ಅತ್ಯಧಿಕ ಮುಂಗಾರು ಮಳೆಯ ಅಬ್ಬರ-ಅತ್ಯಧಿಕ ಮಳೆ ಸುರಿದ ತಾಲೂಕಿನಲ್ಲಿ ಬೆಳ್ತಂಗಡಿಗೆ ಮೂರನೇ ಸ್ಥಾನ, ಬೆಳ್ತಂಗಡಿ ತಾಲೂಕಿನಲ್ಲಿ 748 ಬಿಪಿಎಲ್, ಅಂತ್ಯೋದಯ ಕಾರ್ಡು ರದ್ಧತಿ ಭೀತಿ, ದೊಂಡೋಲೆ ನಾರ್ಯ ರಸ್ತೆ ಕುಸಿತ, ಸೇತುವೆಯೂ ಅಪಾಯದಲ್ಲಿ, ಅಪ್ರತಿಮ ಸಾಹಸಿಕ ಈಶ್ವರ್ ಮಲ್ಪೆಗೆ ಕೇರಳದಿಂದ ನೆರವು ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಮುಂದಿನ ನೇರಪ್ರಸಾರದಲ್ಲಿ * ಸೊಂಟ ಪೋಂಡು.. ಬೆರಿ ಬೇನೆ.. ಅಯ್ಯೋ.. ವಾ ಗುಂಡಿ, ವಾ ಗುಂಡಿ! * ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯಲ್ಲಿ ಬರೋಬ್ಬರಿ 1422 ಹೊಂಡ, ಸಾರ್ವಜನಿಕರ ಆಕ್ರೋಶ | ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನೆ * ವಿಧಾನ ಪರಿಷತ್ ಉಪ ಚುನಾವಣೆಗೆ ಶಾಂತಿಯುತ ತೆರೆ * ಡಾ|| ಹೆಗ್ಗಡೆಯವರ 57ನೇ ಪಟ್ಟಾಭಿಷೇಕದ ಸಂಭ್ರಮ * ಗ್ರಾ.ಪಂ. ಉಪ ಚುನಾವಣೆ * 16 ಸಹಕಾರ ಸಂಘಗಳಿಗೆ ಚುನಾವಣೆ ಘೋಷಣೆ ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿಗೆ 22 ನಿರ್ದೇಶಕರ ಅವಿರೋಧ ಆಯ್ಕೆ * ಪಡಿತರ ವಿತರಣೆಗೆ ಅಡ್ಡಿಯಾದ ಸರ್ವರ್ ಸಮಸ್ಯೆ * ನ್ಯಾಯಬೆಲೆ ಅಂಗಡಿ ಮುಂದೆ ಗ್ರಾಹಕರು ಹೈರಾಣ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಸಾರ್ವಜನಿಕರು 8050294052 ನಂಬರ್‌ಗೆ ಕರೆ ಮಾಡಿ ಮಾತನಾಡಬಹುದು.