Site icon Suddi Belthangady

16 ಸಹಕಾರ ಸಂಘಗಳಿಗೆ ಚುನಾವಣೆ ಘೋಷಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 16 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿ ಡಿಸೆಂಬರ್‌ಗೆ ಪೂರ್ಣಗೊಳ್ಳುವುದರಿಂದ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಸಹಕಾರ ಇಲಾಖೆ ಚುನಾವಣಾ ದಿನಾಂಕ ಘೋಷಣೆ ಮಾಡಿ, ಸಹಕಾರ ಸಂಘಗಳಿಗೆ ಕಳುಹಿಸಿದೆ.
ಚುನಾವಣೆ ನಡೆಯುವ ಸಹಕಾರ ಸಂಘಗಳು: ಡಿಸೆಂಬರ್ 8ರಂದು ಬಂಗಾಡಿ, 25ರಂದು-ಉಜಿರೆ,29ರಂದು ಬೆಳಾಲು, 2025ರ ಜನವರಿ 8- ಹತ್ಯಡ್ಕ, 12-ವೇಣೂರು, 15-ನಿಡ್ಲೆ, 19-ಮುಂಡಾಜೆ, 25-ಕೊಯ್ಯೂರು, 27-ತಣ್ಣೀರುಪಂತ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಯಲಿದೆ.
ಕೊಕ್ಕಡ, ಪದ್ಮುಂಜ, ಮಚ್ಚಿನ, ಪೆರಾಡಿ, ಮಡಂತ್ಯಾರು, ಸುಲ್ಕೇರಿ ಮೊಗ್ರು ಹಾಗೂ ನಾರಾವಿ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆಗೂ ದಿನಾಂಕ ಘೋಷ ಣೆಯಾಗಿದೆ ಎಂದು ತಿಳಿದು ಬಂದಿದೆ.
20 ಹಾಲು ಉತ್ಪಾದಕರ ಸಂಘಗಳಿಗೆ ಚುನಾವಣೆ: ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ೨೦ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚುನಾವಣೆ ನಡೆಯಲಿದೆ.
ಕರಿಮಣೇಲು, ಪೆರಿಂಜೆ, ಕಾಶಿಪಟ್ಣ, ಲಾಯಿಲ, ಉರುವಾಲು, ನಿಡ್ಲೆ, ಮೊಗ್ರು, ಶಾಲೆತಡ್ಕ, ಪುರಿಯ, ಪಣಕಜೆ, ಕಡಿರುದ್ಯಾವರ, ಓಡಿಲ್ನಾಳ, ಸವಣಾಲು, ಮಿತ್ತವಾಗಿಲು, ಮಲವಂತಿಗೆ, ಬಳಂಜ, ಇಂದಬೆಟ್ಟು, ಪಿಲಿಗೂಡು, ಮಂಡೂರು -ದುರ್ಗಾನಗರ ಹಾಗೂ ಆರಂಬೋಡಿ ಹಾಲು ಉತ್ಪಾದಕರ ಸಂಘದಲ್ಲಿ ಚುನಾವಣೆ ನಡೆಯಲಿದೆ.
ಇತರ ಸಹಕಾರಿ ಸಂಘಗಳು: ಬೆಳ್ತಂಗಡಿಯ ಲ್ಯಾಂಪ್ಸ್, ಬೆಳ್ತಂಗಡಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಬೆಳ್ತಂಗಡಿ ತಾಲೂಕು ಬೋಧಕರ ಪತ್ತಿನ ಸಹಕಾರ ಸಂಘ, ನೆರಿಯ ಗ್ರಾಹಕರ ಸಹಕಾರ ಸಂಘ, ಅರಸಿನಮಕ್ಕಿ ವಿವಿಧೋzಶ ಸಹಕಾರ ಸಂಘ, ಉಜಿರೆ ಮಹಿಳಾ ವಿವಿಧೋzಶ ಸಹಕಾರ ಸಂಘ ಹಾಗೂ ಕರಾಯ ಮೂರ್ತೆದಾರರ ವಿವಿಧೋzಶ ಸೇವಾ ಸಹಕಾರ ಸಂಘಗಳಿಗೂ ಚುನಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

Exit mobile version