Site icon Suddi Belthangady

ಪುದುವೆಟ್ಟು: ಸೇತುವೆಯಲ್ಲಿ ಸಿಲುಕಿದ್ದ ಬೃಹತ್ ಮರದ ದಿಮ್ಮಿಗಳ ತೆರವು- ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಕಾರ್ಯಾಚರಣೆ

ಪುದುವೆಟ್ಟು: ಬೊಳ್ಮನಾರ್ ಬಳಿಯ ಸೇತುವೆಯಲ್ಲಿ ಸಿಲುಕಿದ್ದ ಬೃಹತ್ ಮರದ ದಿಮ್ಮಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುದುವೆಟ್ಟು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅ.26ರಂದು ಸ್ವಯಂಸೇವಕರು ತೆರವುಗೊಳಿಸಿದರು.

ಮಳೆಗಾಲದಲ್ಲಿ ದೊಡ್ಡ ದೊಡ್ಡ ಮರಗಳು ಹೊಳೆಯಲ್ಲಿ ತೇಲಿ ಬಂದು ಸೇತುವೆಗೆ ಅಡ್ಡಲಾಗಿ ಸಿಲುಕಿಕೊಂಡಿದ್ದು, ಅಪಾಯಕಾರಿಯಾಗಿತ್ತು. ಈ ಕುರಿತು ಮಾಸಿಕ ಸಭೆಯಲ್ಲಿ ಸ್ವಯಂಸೇವಕರಾದ ಚೇತನ್ ಕುಮಾರ್, ಕಿಶೋರ್ ಪ್ರಸ್ತಾಪಿಸಿದ್ದು, ಚರ್ಚಿಸಿದ ಬಳಿಕ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಸ್ವಯಂಸೇವಕರಾದ ಕಿಶೋರ್, ಡಯಾನಾ, ಚೇತನ್ ಕುಮಾರ್, ದಾಮೋದರ ಗೌಡ, ಶಶಿಧರ ಜಿ., ಧನ್ಯ ಕುಮಾರ್, ಯಶೋದಾ, ಪುಷ್ಪಾ, ಸುಂದರ ಪೂಜಾರಿ, ಆನಂದ ಪಾಲ್ಗೊಂಡಿದ್ದರು.

Exit mobile version