ಉಜಿರೆ: ಯುಜಿಸಿ ಯಿಂದ ಸ್ವಾಯತ್ತ ಸಂಸ್ಥೆ ಎಂಬ ಮಾನ್ಯತೆಗೆ ಪಾತ್ರವಾಗಿರುವ ಉಜಿರೆಯ ಶ್ರೀ ಧ.ಮಂ.ಕಾಲೇಜಿನ 2023-24ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಅ.26ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಉಪಾಧ್ಯಕ್ಷರು ಹಾಗೂ ಗುಲ್ಬರ್ಗ ವಿವಿಯ ಪೂರ್ವ ಕುಲಪತಿ ಪ್ರೊ. ಎಸ್.ಆರ್.ನಿರಂಜನ, ಮಂಗಳೂರು ವಿವಿಯ ಉಪ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಹಷೇಂದ್ರ ಕುಮಾರ್ ಮತ್ತು ಸತೀಶ್ಚಂದ್ರ ಎಸ್., ಕಾಲೇಜಿನ ಉಪ ಪ್ರಾಂಶುಪಾಲ ಕಕಾತ್ಕಲ್, ಕಾಲೇಜಿನ ಉಪನ್ಯಾಸಕರಾದ ಪ್ರೊ. ಎ. ಪಿ. ಶಲೀಫ್, ಪಿ.ವಿಶ್ವನಾಥ್, ನಂದಕುಮಾರ್, ಜಿ.ಆರ್. ಭಟ್, ಶ್ರೀಧರ್, ಸವಿತಾ ಕುಮಾರಿ, ಶಕುಂತಲಾ, ಸುವಿರ್ ಜೈನ್ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಸಿರಿ ಸಂಸ್ಥೆಯ ನಿರ್ದೇಶಕ ಜನಾರ್ಧನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 2023-24ನೇ ಸಾಲಿನ 300 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ 30 ಪದವಿಯ ವಿವಿಧ ವಿಭಾಗಗಳ RANK ವಿಜೇತರಿಗೆ ಪದವಿ ಗೌರವ ನೀಡಿ ಪುರಸ್ಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ ಸ್ವಾಗತಿಸಿದರು.