ಗುರಿಪಳ್ಳ: ಗುರಿಪಳ್ಳ ಅಂಗನವಾಡಿ ಬಳಿಯ ನಾರಾಯಣ ಮೂಲ್ಯ (57ವ) ಅ.25ರಂದು ನಿಧನರಾಗಿದ್ದಾರೆ. ಮೃತರು ಮೇಸ್ತ್ರಿ ಕೆಲಸ ಮಾಡುತ್ತಿದ್ದವರಾಗಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಕೆಲದಿನ ಗಳ ಹಿಂದೆ ಕೆಲಸ ಮಾಡುವ ಸಂದರ್ಭದಲ್ಲಿ ಬಿದ್ದು ಗಾಯ ಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಗುರಿಪಳ್ಳ ಶಾಲೆಯ ಅಡುಗೆ ನಿವೃತ್ತ ಸಹಾಯಕಿ ಶ್ಯಾಮಲ, ಪುತ್ರ ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಉದ್ಯೋಗಿ ನಿಕೇಶ, ಮಗಳು ಗಾಯತ್ರಿ ಕುಂದಾಪುರದಲ್ಲಿ ಬಿಎಸ್ಸಿ ನರ್ಸಿಂಗ್ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.