Site icon Suddi Belthangady

ಬಳಂಜ: ಸಿದ್ದಾಪುರ ಶ್ರೀ ಗಂಗಾಂಬಿಕ ದೇವಸ್ಥಾನದ ವರ್ಷಾವಧಿ ಗಂಗಾಷ್ಟಮಿ ಉತ್ಸವ- ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಭಾಗಿ

ಬಳಂಜ: ಅ.25ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶ್ರೀ ಗಂಗಾಂಬಿಕ ದೇವಸ್ಥಾನದ ವರ್ಷಾವಧಿ ಗಂಗಾಷ್ಟಮಿ ಉತ್ಸವದಲ್ಲಿ ನಡೆಯುವ ಶೋಭಯಾತ್ರೆಯಲ್ಲಿ ಕುಣಿತ ಭಜನಾ ಕಾರ್ಯಕ್ರಮ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ತೆರಳಿದ್ದಾರೆ.

ಕಳೆದ ವರ್ಷವೂ ಇಲ್ಲಿನ ಉತ್ಸವದಲ್ಲಿ ಭಾಗವಹಿಸಿ ಉತ್ತರ ಕನ್ನಡ ಜಿಲ್ಲೆಯ ಜನರ ಮನ ಗೆದ್ದಿದ್ದ ಬ್ರಹ್ಮಶ್ರೀ ಮಂಡಳಿಯವರನ್ನು ಈ ವರ್ಷವೂ ಗುರುತಿಸಿ ಅಲ್ಲಿನ ಆಡಳಿತ ಮಂಡಳಿಯ ಸದಸ್ಯರು ಆಹ್ವಾನವನ್ನು ನೀಡಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ಮಂಡಳಿಯನ್ನು ಕಟ್ಟಿ ಬೆಳೆಸಿದ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ತಿಳಿಸಿದ್ದಾರೆ. ಈಗಾಗಲೇ 230ಕ್ಕೂ ಹೆಚ್ಚು ಕುಣಿತ ಭಜನೆಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡಿದ್ದು ಮಾತ್ರವಲ್ಲದೇ, ಹೊರ ರಾಜ್ಯಗಳಲ್ಲೂ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಸಮಾಜ ಸೇವಕ ಹರೀಶ್ ವೈ ಚಂದ್ರಮರ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ತರಬೇತಿ ನೀಡಿದ ಫಲವಾಗಿ ಇಂದು ಮಂಡಳಿ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ. ಜ್ಯೋತಿ ಅಧ್ಯಕ್ಷರಾಗಿ, ಮಾನ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

Exit mobile version