Site icon Suddi Belthangady

ಬೆಳ್ತಂಗಡಿ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

ಬೆಳ್ತಂಗಡಿ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 2024-25ನೇ ಸಾಲಿನ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭವು ಶಾಲಾ ಸಂಚಾಲಕ ವಂ. ಫಾ. ಅಬೆಲ್ ಲೋಬೊ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು. ಮಕ್ಕಳ ಪ್ರಾರ್ಥನೆಯ ನಂತರ ವಿದ್ಯಾರ್ಥಿನಿ ಶಾರೋನ್ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು ಹಾಗೂ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೊತೆಗೆ ಸನ್ಮಾನಿತರೂ ಆಗಿರುವ ಫಾ.ಆಸ್ಮೊಂಡ್ ಡಿ’ಸೋಜಾ ವಿಜ್ಞಾನದ ಮಾದರಿಗಳನ್ನು ಮಾಡುವುದರ ಜೊತೆಗೆ ಮಕ್ಕಳು ಕುತೂಹಲದಿಂದ ಕಲಿಕೆಯಲ್ಲೂ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಶಾಲಾ ಸಂಚಾಲಕರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ದೇವರು ಭೂಮಿಯನ್ನು ಸೃಷ್ಟಿಸಿದಾಗ ಕೆಲವೊಂದು ಅದ್ಭುತಗಳನ್ನು ಸೃಷ್ಟಿಸಿದ್ದಾನೆ ಅದನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಕಾರ‍್ಯಕ್ರಮಕ್ಕೆ ಶುಭ ಕೋರಿದರು. ಕಾರ‍್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸ್ಟಾನಿ ಪಿಂಟೋ ಹಾಗೂ ಅನಿತಾ ಮೋನಿಸ್ ಉಪಸ್ಥಿತರಿದ್ದರು. ಸಹಶಿಕ್ಷಕಿ ವಿನಯಲತಾ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ರೀಮ್ ಧನ್ಯವಾದವನ್ನಿತ್ತರು. ಇದಾದ ಬಳಿಕ ವಸ್ತುಪ್ರದರ್ಶನ ವೀಕ್ಷಣೆಯು ನಡೆಯಿತು. ಸ್ಥಳೀಯ ಹಲವು ಶಾಲೆಗಳ ಮಕ್ಕಳು ವಸ್ತು ಪ್ರದರ್ಶನನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version