ಉಜಿರೆ: ಅ.22ರಂದು ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಮಂಗಳೂರು ಜಿಲ್ಲಾಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಎಸ್.ಡಿ.ಎಮ್. ಕಾಲೇಜಿನ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅನುಷಾ ಬಿ. ಹ್ಯಾಮರ್ ತ್ರೋ ವಿಭಾಗದಲ್ಲಿ ಚಿನ್ನದ ಪದಕ, ಸಿಂಪನ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ ಹಾಗೂ 6 ಕಿ.ಮೀ. ಗುಡ್ಡಗಾಡು ಓಟದಲ್ಲಿ ದರ್ಶನ್, ಆದಿತ್ಯ, ನಂದನ್ ಹಾಗೂ ಬಾಲಕಿಯರ ವಿಭಾಗದಲ್ಲಿ 4 ಕಿ.ಮೀ. ಓಟದಲ್ಲಿ ಧನ್ಯ ಪ್ರಭು ಇವರು ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂದೇಶ್ ಪೂಂಜಾ ತರಬೇತಿಯನ್ನು ನೀಡಿರುತ್ತಾರೆ.