ಬೆಳ್ತಂಗಡಿ: ಅ.24 ಗುರುವಾರದಂದು ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ವಿದ್ಯುತ್ ನಿಲುಗಡೆಯಾಗಲಿದೆ. 11ಕೆವಿ ನಾರಾವಿ, ಲಾಯಿಲ ಹಾಗೂ ಬಳ್ಳಮಂಜ ಫೀಡರಿನ ಹೆಚ್.ಟಿ ಲೈನಿನ ಜಿ.ಓ.ಎಸ್ ಗಳ ನಿರ್ವಹಣೆ ಹಾಗೂ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಬೆಳಿಗ್ಗೆ ಗಂಟೆ:10.00ರಿಂದ ಸಂಜೆ ಗಂಟೆ 5.30ರ ತನಕ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.