Site icon Suddi Belthangady

ಉಜಿರೆ: ರೈತ ಉತ್ಪಾದಕರ ಕಂಪನಿಯಲ್ಲಿ ಕುಚ್ಚಲು ಅಕ್ಕಿ ಬಿಡುಗಡೆ- ಸನ್ಮಾನ ಕಾರ್ಯಕ್ರಮ

ಉಜಿರೆ: ಉಜಿರೆ ರೈತ ಉತ್ಪಾದಕರ ಕಂಪನಿಯ ನೂತನ ಕುಚ್ಚಲು ಅಕ್ಕಿ ಸಹಾಯಕ ಕೃಷಿ ನಿರ್ದೇಶಕರಿಂದ ಮಾರುಕಟ್ಟೆಗೆ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಅ.23ರಂದು ಬೆಳಾಲು ರಸ್ತೆ, ಓಡಲದಲ್ಲಿರುವ ಕಂಪನಿಯ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ನೋಂದಾಯಿತ ರೈತರಿಗೆ ಉತ್ತಮ ಗುಣಮಟ್ಟದ ಕುಚ್ಚಲು ಅಕ್ಕಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ. ಎಂ. ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಕಂಪನಿಯ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನಿಂದಲೇ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವರ್ಗಾವಣೆ ಹೊಂದುತ್ತಿರುವ ಸಹಾಯಕ ಕೃಷಿ ನಿರ್ದೇಶಕರನ್ನು ಕಂಪನಿಯ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಜಿ. ಗಣೇಶ್ ಭಟ್ ನಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಗೌಡ ಕಲ್ಕೂರ್ಣೀ, ಕಂಪನಿಯ ನಿರ್ದೇಶಕರುಗಳಾದ ಜಯಂತ ನಡ, ಶಿವಾನಂದ ಮಯ್ಯ ಅರಶಸಿನಮಕ್ಕಿ, ಸೀತಾರಾಮ ಶೆಟ್ಟಿ ಕೆಂಬರ್ಜೆ, ಚಂದ್ರಶೇಖರ ಗೌಡ ನಿಡ್ಲೆ, ಜಿ. ಡಿ. ಪುಷ್ಪ, ಯೋಜನಾ ಅಧಿಕಾರಿ ಡಿಕೆಶಿ, ಧರ್ಮೇಂದ್ರ, ಸಿಬ್ಬಂದಿ ನಿರೀಕ್ಷಾ, ಪಂಚಾಯತ್ ಸದಸ್ಯ ಮಹಮ್ಮದ್ ಶರೀಫ್ ಉಜಿರೆ ಹಾಗೂ ರೈತರು ಉಪಸ್ಥಿತರಿದ್ದರು.

Exit mobile version