Site icon Suddi Belthangady

ನೆಲ್ಯಾಡಿ: ಕಿರಿಯ ಕುಸುಮ ಮಿಷನ್ ಲೀಗ್ ಉದನೆ ವಲಯ ಸಾಂಸ್ಕೃತಿಕ ವೈಭವ- ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ಪ್ರಥಮ, ಸೆಂಟ್ ಮೇರಿಸ್ ಆರ್ಲ ದ್ವಿತೀಯ.

ನೆಲ್ಯಾಡಿ: ಕಿರಿಯ ಕುಸುಮ ಮಿಷನ್ ಲೀಗ್ ಉದನೆ ವಲಯ ಸಾಂಸ್ಕೃತಿಕ ವೈಭವದಲ್ಲಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ಕೊನೆಗೊಂಡ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಹದಿನೈದು ವರ್ಷದೊಳಗಿನ ಬಾಲಕ ಬಾಲಕಿಯರ ಕಿರಿಯ ಕುಸುಮ ಮಿಷನ್ ಲೀಗ್ ಇದರ ದ್ವೈವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗುಂಪು ವಿಭಾಗದಲ್ಲಿ ಸ್ಕಿಟ್, ಸಮೂಹ ಗಾಯನ, ವ್ಯಕ್ತಿಗತ ವಿಭಾಗದಲ್ಲಿ ನೃತ್ಯ, ಸೋಲೋ ಗಾಯನ, ಭಾಷಣ, ವಚನ ಮಾಲೆ, ಬೈಬಲ್ ವಾಚನಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಒಟ್ಟು 35 ಅಂಕಗಳೊಂದಿಗೆ ಗ್ರೂಪ್ ಚಾಂಪಿಯಾನ್ಸ್ ಆಗಿ ಹೊರ ಹೊಮ್ಮಿದೆ.

ಸೆಂಟ್ ಮೇರಿಸ್ ಆರ್ಲ ತಂಡವು ದ್ವಿತೀಯ ಸ್ಥಾನಗಳಿಸಿದ್ದು ಭಾಷಣ, ಸೋಲೋ ಗಾಯನ, ವಚನ ಮಾಲೆ ಪ್ರಥಮ ಸ್ಥಾನ ಪಡೆದು, ಸಮೂಹ ಗಾಯನದಲ್ಲಿ ತೃತೀಯ ಸ್ಥಾನದೊಂದಿಗೆ ರನ್ನರ್ಸ್ ಅಪ್ ಆಗಿ ಹೊರ ಹೊಮ್ಮಿದೆ.

ಉದನೆ ಸೆಂಟ್ ತೋಮಸ್ ಫೋರೆನ್ ಚರ್ಚ್ ನ ಧರ್ಮಗುರು ವಂ.ಫಾ.ಸಿ.ಬಿ. ತೋಮಸ್ ಪನಚಿಕ್ಕಲ್, ಫಾ. ಜೋಸೆಫ್ ಪೂದಕ್ಕುಯಿ, ಶಿರಾಡಿ ಶ್ರಿ ರೊಯ್ ನೆಲ್ಯಾಡಿ, ಟೊಮಿ ಮಟ್ಟಮ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ನೆಲ್ಯಾಡಿ ಚರ್ಚ್ ನ ವಂ.ಫಾ. ಶಾಜಿ ಮಾತ್ಯು ವಿಜೇತರನ್ನು ಅಭಿನಂದಿಸಿದರು. ಅಡ್ಡ ಹೊಳೆ ಸೆಂಟ್ ಜೋಸೆಫ್ ಚರ್ಚ್ ನ ವ.ಫಾ. ಜೋಸೆಫ್ ಪಾಂಪಕಲ್ ಕಾರ್ಯಕ್ರಮದ ಮುಖ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು.

Exit mobile version