Site icon Suddi Belthangady

ಉಜಿರೆ: ಮರದಲ್ಲಿ ಸಿಲುಕಿಕೊಂಡಿರುವ ಅರ್ಧ ಕಡಿದ ಕೊಂಬೆ – ವಯರ್ ಬಿದ್ದ ರೆಂಬೆಯ ಸೊಪ್ಪು ಮಾತ್ರ ತೆಗೆದ ಮೆಸ್ಕಾಂ ಸಿಬ್ಬಂದಿ – ಸಾರ್ವಜನಿಕರು,ವಿದ್ಯಾರ್ಥಿಗಳ ಮೇಲೆ ಬಿದ್ದರೆ ಯಾರು ಗತಿ

ಉಜಿರೆ: ಇಲ್ಲಿನ ಬೆಳಾಲು ಕ್ರಾಸ್ ಸಮೀಪದಲ್ಲಿರುವ ಶ್ರೀರಾಮ್ ಮೊಬೈಲ್ಸ್ ಸಮೀಪದಲ್ಲಿರುವ ಮರದಲ್ಲಿ ತುಂಡಾಗಿ ನೇತಾಡುತ್ತಿರುವ ಕೊಂಬೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಮರದ ಕೊಂಬೆ ಮುರಿದು ವಿದ್ಯುತ್ ವಯರ್ ಗೆ ತಾಗುತ್ತಿತ್ತು. ಕೂಡಲೇ ಬಂದ ಮೆಸ್ಕಾಂ ಸಿಬ್ಬಂದಿ ವಯರ್ ಗೆ ತಾಗುತ್ತಿದ್ದ ಸೊಪ್ಪು ತೆಗೆದು ಕೊಂಬೆಯನ್ನು ಹಾಗೇ ಬಿಟ್ಟಿದ್ದಾರೆ. ಫುಟ್ ಪಾತ್ ಪಕ್ಕದಲ್ಲೇ ಮರ ಇರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಓಡಾಡುವ ಸ್ಥಳವಾಗಿದ್ದು, ಯಾರದಾದರೂ ಮೇಲೆ ಬಿದ್ದರೆ ಪ್ರಾಣ ಹಾನಿಯಾದರೂ ಅಚ್ಚರಿಯಿಲ್ಲ. ಆದ್ದರಿಂದ ಈ ಮರದ ಕೊಂಬೆಗಳನ್ನು ಕೂಡಲೇ ತೆರವುಗೊಳಿಸಿ, ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕಿದೆ.

ಇದಕ್ಕಾಗಿ ಸಾರ್ವಜನಿಕರು ಸುದ್ದಿಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ. ಈ ಅಪಾಯಕಾರಿ ಕೊಂಬೆಯನ್ನು ತೆಗೆಯುವವರಾರು? ಮೆಸ್ಕಾಂನವರು ಕೊಂಬೆ ತೆಗೆಯದೇ ಬಿಟ್ಟಿದ್ಯಾಕೆ? ಅಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Exit mobile version