Site icon Suddi Belthangady

ಹತ್ಯಡ್ಕ: ಪಡಿತರ ವಿತರಣೆಗೆ ಸರ್ವರ್ ತೊಂದರೆ- ಸಮಸ್ಯೆ ಬಗೆಹರಿಸುವಂತೆ ಒತ್ತಾಯ

ಹತ್ಯಡ್ಕ: ನಿರಂತರ ಸರ್ವರ್ ಸಮಸ್ಯೆಯಿಂದ ರೇಷನ್ ವಿತರಣೆಗೆ ಸಮಸ್ಯೆಯಾಗಿದ್ದು, ಅರಸಿನಮಕ್ಕಿ ಪಡಿತರ ವಿತರಣಾ ಕೇಂದ್ರಕ್ಕೆ ಅಕ್ಕಿಗೋಸ್ಕರ ತಮ್ಮ ಇಡೀ ದಿನದ ಕೆಲಸ ಬಿಟ್ಟು ಸುತ್ತ ಮುತ್ತಲಿನ ಮತ್ತು ಪಕ್ಕದ ಗ್ರಾಮದವರು ಕೂಡ ಅಕ್ಕಿ ತೆಗೆದುಕೊಂಡು ಹೋಗಲು ದಿನನಿತ್ಯ ಬಂದು ಹೋಗುವ ಪರಿಸ್ಥಿತಿ ಎದುರಾಗಿದೆ.

ಸರ್ವರ್ ಸಮಸ್ಯೆಯಿಂದ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿತರಕರು ತಿಳಿಸಿದ್ದು, ಕೆಲವರು ಅಕ್ಕಿ ತೆಗೆದುಕೊಂಡು ಹೋಗಲು ಬಾಡಿಗೆ ಆಟೋ ಮಾಡಿಕೊಂಡು ಬಂದು ಕಾಯುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

Exit mobile version