ಪದ್ಮುಂಜ: ಪದ್ಮುಂಜ ಇಲ್ಲಿಯ ಬಸ್ ಸ್ಟಾಂಡ್ ಎದುರುಗಡೆ ಕಾಸಿಂ ಪದ್ಮುಂಜರವರ ಕಟ್ಟಡದಲ್ಲಿ ಅ.16ರಂದು ನೂತನವಾಗಿ ಶ್ರೀ ಲಕ್ಷ್ಮೀ ಫ್ಲವರ್ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗಡಿ ಮಾಲಕ ಲೋಕಪ್ಪ ಪದ್ಮುಂಜದಲ್ಲಿ ಶಾಲಾ ಕಾಲೇಜುಗಳು, ಕೆನರಾ ಬ್ಯಾಂಕ್, ಸಿ ಎ ಬ್ಯಾಂಕ್, ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆ ಸೇರಿದಂತೆ ಬೇರೆ ಬೇರೆ ಊರಿನ ಜನರ ಸಂಚಾರ ಹೆಚ್ಚಾಗಿರುವ ಪ್ರದೇಶವಾಗಿದೆ. ಈ ಗ್ರಾಮೀಣ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ಮಾಡುವ ತುಂಬಾ ರೈತರಿದ್ದಾರೆ. ಇಲ್ಲಿ ಒಂದು ಹೂವಿನ ವ್ಯಾಪಾರ ನಡೆಸುವ ಅಂಗಡಿ ತೆರೆದರೆ ರೈತರಿಗೂ ಅನುಕೂಲವಾಗಬಹುದು ಎಂದು ಯೋಚಿಸಿ, ಪದ್ಮುಂಜದಲ್ಲಿ ಹೂ ವ್ಯಾಪಾರದ ಅಂಗಡಿ ಪ್ರಾರಂಭಿಸಿದ್ದೇವೆ. ಹೂವಿನ ಬಳಕೆದಾರರು ಹಾಗೂ ಗ್ರಾಮಸ್ಥರು ಆಶೀರ್ವದಿಸಬೇಕು ಎಂದರು.
ಧನುಶ್ ಗೌಡ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.