Site icon Suddi Belthangady

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಬೆಳ್ತಂಗಡಿ: ದೇಶದ ಬೆಳವಣಿಗೆಯಲ್ಲಿ ಯುವ ಜನಾಂಗ ತೊಡಗಿಸಿ ಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು ಎಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಕನ್ಯಾಡಿ I ಸಹ ಶಿಕ್ಷಕ ವಿಕಾಸ್ ರಾವ್ ಹೇಳಿದರು.

ಅವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ I ಇಲ್ಲಿ ನಡೆದ ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ, ಸಕರಾತ್ಮಕ ಚಿಂತನೆಗಳೊಂದಿಗೆ ನಿಸ್ವಾರ್ಥ ಸೇವೆ, ಭಾವೈಕ್ಯತೆ, ಸೌಹಾರ್ದತೆ ಹಾಗೂ ಜೀವನಾನುಭವಗಳನ್ನು ಎನ್ ಎಸ್ ಎಸ್ ನಿಂದ ಪಡೆಯಲು ಸಾಧ್ಯ. ಇಂತಹ ಚಟುವಟಿಕೆಗಳಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ ಅಜ್ರಿ, ಬೆಳ್ತಂಗಡಿಯ ಉದ್ಯಮಿ ಶ್ರೀ ಅಭಿನಂದನ್ ಹರೀಶ್ ಕುಮಾರ್, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಗಣೇಶ್ ಕನಾಲು, ಬೆಳ್ತಂಗಡಿ ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಬೆಳ್ತಂಗಡಿ ಜೈನ್ ರೆಸ್ಟೋರೆಂಟ್ ನ ಮಾಲಕ ಸಂತೋಷ್ ಕುಮಾರ್ ಜೈನ್, ನಡ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ವಿ ಜೆ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿ I ಮುಖ್ಯೋಪಾಧ್ಯಾಯ ಹನುಮಂತರಾಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೋಣಯ್ಯ ಗೌಡ, ಜನಾರ್ದನ ಗೌಡ ಕಡ್ತಿಯಾರ್, ನಾರಾಯಣ ಗೌಡ ಕೈಲಾಜೆ ಉಪಸಿತರಿದ್ದರು.
ವಾಣಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಸ್ವಾಗತಿಸಿದರು. ಎನ್ಎಸ್ಎಸ್ ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ದೀಕ್ಷಾ ವರದಿ ವಾಚಿಸಿದರು. ಎನ್ಎಸ್ಎಸ್ ಮುಖ್ಯಕಾರ್ಯಕ್ರಮಾಧಿಕಾರಿ ಶಂಕರ್ ರಾವ್ ಧನ್ಯವಾದವಿತ್ತರು. ಉಪನ್ಯಾಸಕ ಸುಧೀರ್ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು.

Exit mobile version