Site icon Suddi Belthangady

ಬೆಳಾಲು: ಅನಂತೋಡಿಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಯುವ ಸಿರಿ ನಾಟಿ ಕಾರ್ಯಕ್ರಮ

ಬೆಳಾಲು : ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಶ್ರೀ ಧ. ಮ. ಕಾಲೇಜು ರಾಷ್ಟ್ರೀಯ ಯೋಜನಾ ಘಟಕಗಳು, ಉಜಿರೆ ಶ್ರೀ ಧ. ಮ. ಸ್ಪೋರ್ಟ್ಸ್ ಕ್ಲಬ್, ಬೆಳ್ತಂಗಡಿ ರೋಟರಿ ಕ್ಲಬ್, ತಾಲೂಕು ಪತ್ರಕರ್ತರ ಸಂಘ, ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನದ ಸಹಯೋಗದಲ್ಲಿ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನದ ಸಮೀಪದ ಗದ್ದೆಯಲ್ಲಿ ಅ. 20ರಂದು ಯುವ ಸಿರಿ, ರೈತ ಭಾರತದ ಐಸಿರಿ ಸುಮಾರು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿನಾಟಿ ಕಾರ್ಯಕ್ರಮ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ. ಮೋಹನ್ ಕುಮಾರ್ ಹೇಳಿದರು. ಅವರು ಅ.15ರಂದು ಉಜಿರೆ ಒಷಿನ್ ಪರ್ಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಾಗೂ ಭತ್ತದ ಕೃಷಿ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನಂತೋಡಿಯಲ್ಲಿರುವ ನಾಲ್ಕುವರೆ ಎಕ್ರೆ ಗದ್ದೆಯಲ್ಲಿ ಭತ್ತದ ಬಿತ್ತನೆಯಿಂದ ಕಟಾವು ಕಾರ್ಯದವರೆಗೆ ಯುವ ಜನತೆಯನ್ನು ಸೇರಿಸಿಕೊಂಡು ಮಾಡಿಸಲಾಗುವುದು. ನಾಟಿಯ ಬಳಿಕ ಗೊಬ್ಬರ ಹಾಕುವುದು, ಪೋಷನೆ, ಕಟಾವು ಮಾಡುವುದು, ಬಳಿಕ ಬೈಹುಲ್ಲು ನಂದ ಗೋಕುಲಕ್ಕೆ ತಲುಪಿಸುವುದು. ಭತ್ತದಿಂದ ಅಕ್ಕಿ ಮಾಡಿ ಮುಡಿ ಕಟ್ಟಿ ದೇವಸ್ಥಾನಕ್ಕೆ ನೀಡಲಾಗುವುದು ಎಂದರು.

ಕಾರ್ಯಕ್ರಮವನ್ನು ಸೋನಿಯಾ ಯಶೋವರ್ಮ ಉದ್ಘಾಟನೆ ಮಾಡಲಿದ್ದು, ಉಜಿರೆ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ, ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶಚಂದ್ರ ಎಸ್., ಉಜಿರೆ ಕಾಲೇಜು ಪ್ರಾಂಶುಪಾಲ ಡಾ. ಬಿ. ಎ.ಕುಮಾರ ಹೆಗ್ಡೆ, ಸಿರಿ ಸಂಸ್ಥೆಯ ಎಂ.ಡಿ. ಕೆ. ಎನ್. ಜನಾರ್ದನ, ರವೀಶ್ ಪಡುಮಲೆ, ಪೂರನ್ ವರ್ಮ, ಚೈತ್ರೇಶ್ ಇಳಂತಿಲ, ಬಿ. ಕೆ. ಧನಂಜಯ ರಾವ್, ಶ್ರೀನಿವಾಸ ಗೌಡ ಬೆಳಾಲು, ಜೇಮ್ಸ್ ಅಬ್ರಹಾಂ, ಬಾಲಕೃಷ್ಣ ಪೂಜಾರಿ ಬಜೆ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಾಧಕ ಬಿ. ಕೆ. ದೇವರಾವ್ ರನ್ನು ಗೌರವಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಧ. ಮ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್, ಮಾಜಿ ಕಾರ್ಯದರ್ಶಿ ಶ್ರೀಧರ್ ಕೆ. ವಿ. ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಉಪಸ್ಥಿತರಿದ್ದರು.

Exit mobile version