Site icon Suddi Belthangady

ಬೆಳ್ತಂಗಡಿ: ಶ್ರೀ ಗುರುದೇವ ಪ.ಪೂ.ಕಾಲೇಜು ಎನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ

ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಎನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ.10ರಂದು ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಅತಿಥಿ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ, ಶಿಬಿರಾರ್ಥಿಗಳು ಶ್ರದ್ಧೆಯಿಂದ ಶಿಬಿರದಲ್ಲಿ ಭಾಗವಹಿಸಿ, ಶಿಸ್ತು, ಸಂಯಮ ಪ್ರಾಮಾಣಿಕತೆಯನ್ನು ಬೆಳೆಸಿ-ಉಳಿಸುವಲ್ಲಿ ಗುರುದೇವ ವಿದ್ಯಾರ್ಥಿಗಳು ಒಂದು ಕೈ ಮೇಲು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಸುಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಬಿ. ಎ ಶಮಿಯುಲ್ಲಾ, ಪ್ರಮುಖರಾದ ಪಿಲತಾಬೆಟ್ಟು ಪ್ಯಾಕ್ಸ್, ಅಧ್ಯಕ್ಷ ತುಂಗಪ್ಪ ಬಂಗೇರ , ಎಸ್‌ಡಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ, ವಾಮದಪದವು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲೆ ವಿದ್ಯಾ ಕುಮಾರಿ, ಹಾಲು ಉತ್ಪಾದಕರ ಸಂಘ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್ ಪೂಂಜ ಅಜ್ಜಿಬೆಟ್ಟು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನದಾಸ್ ಗಟ್ಟಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಪೂಜಾರಿ ಕಲ್ಲು ಕೊಡಂಗೆ, ಸಹ ಶಿಬಿರಾಧಿಕಾರಿ ಏಂಜಲ್ ಪ್ರಿಯಾ, ರವಿ ರಾಮ್ ಶೆಟ್ಟಿ ಮತ್ತು ಘಟಕದ ನಾಯಕ ವಿಕಾಸ್ ಉಪಸ್ಥಿತರಿದ್ದರು.

ಸಹ ಯೋಜನಾಧಿಕಾರಿ ಸೌಜನ್ಯ ವಾರ್ಷಿಕ ವಿಶೇಷ ಶಿಬಿರದ ಸಮಗ್ರ ವರದಿ ಮಂಡಿಸಿದರು. ಗ್ರಾಮ ಸಮೀಕ್ಷೆಯ ವರದಿಯನ್ನು ಘಟಕದ ನಾಯಕಿ ಜಯಶ್ರೀ ವಾಚಿಸಿದರು. ಯೋಜನಾಧಿಕಾರಿ ಶಿವರಾಜ್ ಗಟ್ಟಿ ಸ್ವಾಗತಿಸಿ, ಸಹಯೋಜನಾಧಿಕಾರಿ ಚಂದನಾ ವಂದಿಸಿ , ಶಿಬಿರಾರ್ಥಿಗಳಾದ ದೀಪಕ್ ಮತ್ತು ಖುಷಿ ನಿರೂಪಿಸಿದರು.

Exit mobile version