Site icon Suddi Belthangady

ಅರಸಿನಮಕ್ಕಿ: ನ.10ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

ಅರಸಿನಮಕ್ಕಿ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನ. 10ರಂದು ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ ರೆಖ್ಯದಲ್ಲಿ ನಡೆಯಲಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಆನಂದ ಗೌಡ ಮಾತಾನಾಡಿ ಇಂದು ಜಗತ್ತಿನಲ್ಲಿ 157 ಕ್ರೈಸ್ತ, 52 ಮುಸ್ಲಿಂ, 13 ಬೌದ್ಧ ಮತ್ತು 1 ಯಹೂದಿ ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ. ಜಾತ್ಯತೀತ ಭಾರತದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಾತ್ಯತೀತ ಸರಕಾರವು ದೇವಾಲಯಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತವೆ ಮತ್ತು ಹಿಂದೂಗಳ ತೀರ್ಥಯಾತ್ರೆಗಳ ಮೇಲೆ ತೆರಿಗೆಯನ್ನು ಹೇರುತ್ತದೆ. ಮತಾಂತರ, ಲವ್ ಜಿಹಾದ್, ಉಗುಳು ಜಿಹಾದ್ ಮುಂತಾದ ಷಡ್ಯಂತ್ರಗಳು ಬಯಲಾಗುತ್ತಿವೆ. ಆದುದರಿಂದ ಇದಕ್ಕೆಲ್ಲ ಒಂದೇ ಪರಿಹಾರ ಭಾರತವನ್ನು ಸವಿಂಧಾನ ಬದ್ಧವಾಗಿ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಬೇಕೆಂದು ನುಡಿದರು.

ಈ ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಜಯರಾಮ ನೆಲ್ಲಿತ್ತಾಯ, ಧಾರ್ಮಿಕ ಮುಂದಾಳು ಹಾಗೂ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ದಾಮೋದರ ಗೌಡ ಕೊಲೆಚ್ಚಾವು ನಾಲೆಕ್ಕಿ ಗುತ್ತಿನ ಮನೆ ಹಾಗೂ ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ ಗ್ರಾಮದ ಹಿಂದುತ್ವ ನಿಷ್ಟರು, ಹಾಗೂ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

ನ.10ರಂದು ನಡೆಯಲಿರುವ ಹಿಂದೂ ರಾಷ್ಟ್ರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮ ಪ್ರೇಮಿಗಳು, ಬಂಧು ಭಗೀನಿಯರು ಭಾಗಿಯಾಗಬೇಕು ಮತ್ತು ಹೆಚ್ಚು ಸಂಖ್ಯೆ ಸೇರಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಿ ಸಭೆಯನ್ನು ಯಶಸ್ವೀಗೊಳಿಸಿ ರಾಷ್ಟ್ರ ಹಾಗೂ ಧರ್ಮದ ಭಗವಂತನ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಎಂದು ಕರೆ ನೀಡಿದರು. ಸಮಿತಿಯ ಬಾಲಕೃಷ್ಣ ಗೌಡ, ಯಂ.ಹರೀಶ್, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿ ಸೇವಕ ದಾಮೋದರ ಗೌಡ ಧನ್ಯವಾದವಿತ್ತರು.

Exit mobile version