ಬೆಳ್ತಂಗಡಿ: ನಡ ಗ್ರಾಮದ ಅಜಯನಗರ ಅಣ್ಣಪ್ಪ ಕೋಡಿ ರಸ್ತೆಯ ನದಿಗೆ ನಿರ್ಮಿಸಲಾಗಿದ್ದ ಬಸರಾಯ ವೆಂಟೆಡ್ ಡ್ಯಾಮ್‌ನ ರಿಟೆನಿಂಗ್ ವಾಲ್ ಮೇಲೆ ನಿರ್ಮಿಸಲಾಗಿದ್ದ ಕಂಪೌಂಡ್ ಮಳೆಯಿಂದಾಗಿ ಕುಸಿದು ಬಿದ್ದ ಘಟನೆ ನಡೆದಿದೆ.
ನಿರ್ಮಾಣದ ಸಂದರ್ಭದಲ್ಲಿ ಜಾಗದ ಮಾಲೀಕರಲ್ಲಿ ಹಲವಾರು ಬಾರಿ ಹೇಳಿದ್ದರೂ ಲೆಕ್ಕಿಸದೆ ಕಂಪೌಂಡ್ ನಿರ್ಮಿಸಲಾಗಿತ್ತು. ನಡ ಗ್ರಾಮ ಪಂಚಾಯತ್‌ಗೆ ದೂರು ಕೊಟ್ಟರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ ಎಂದು ಆರೋಪ ಕೇಳಿ ಬಂದಿದೆ.