Site icon Suddi Belthangady

ಮೊಗ್ರು: ಮುಗೇರಡ್ಕ ಶ್ರೀರಾಮ ಶಿಶುಮಂದಿರದಲ್ಲಿ ಶಾರದ ಪೂಜಾ ಮಹೋತ್ಸವ

ಮೊಗ್ರು: ಅಲೆಕ್ಕಿ ಮುಗೇರಡ್ಕ ಶ್ರೀ ರಾಮ ಶಿಶುಮಂದಿರದಲ್ಲಿ ಅದ್ದೂರಿಯಾಗಿ ಶಾರದಾ ಪೂಜೆ, ಮಕ್ಕಳ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ ಸಡಗರದಿಂದ ನಡೆಯಿತು.

ಮಾತೃ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ವಾಹನ ಪೂಜೆ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಯಿತು. ಉಪಹಾರವನ್ನು ಭರತೇಶ್ ಜಾಲ್ನಡೆ , ದಿನೇಶ್ ಕೆಲೆಂಜಿಮಾರು ನೀಡಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ರಾಮ ಶಿಶು ಮಂದಿರದ ಮಕ್ಕಳು ಪೋಷಕರು ಮಾತಾಜಿಯವರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ವಿಶೇಷವಾಗಿ ನೂತನವಾಗಿ ರಚನೆಗೊಂಡ ಜೈ ಶ್ರೀ ರಾಮ್ ಮಹಿಳಾ ಸಂಘವನ್ನು ಸಸಿ ನೆಡುವುದರ ಮೂಲಕ ನೂತನ ಸಮಿತಿಗೆ ಚಾಲನೆ ನೀಡಲಾಯಿತು.

ಮಹಿಳಾ ಸಂಘದ ಅಧ್ಯಕ್ಷೆ ತೀರ್ಥಕಲಾ ಮುಂಡಾಜೆ ಉಪಾಧ್ಯಕ್ಷ ಶಶಿಪ್ರಭ ಕೊಂಬೇಡಿ, ಮಮತಾ ಕೆಲೆಂಜಿಮಾರು, ಕಾರ್ಯದರ್ಶಿ ಭವ್ಯ ಗಣೇಶ ಕೇದಗೆದಕೋಡಿ , ಜೊತೆ ಕಾರ್ಯದರ್ಶಿ ಮಂಜುಶ್ರೀ ಊoತನಾಜೆ, ಸುಮ ಎರ್ಮಳ, ಕೋಶಾಧಿಕಾರಿ ಸವಿತಾ ಪದ್ಮುಂಜ, ಭವ್ಯ ಪರಕ್ಕಾಜೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version