Site icon Suddi Belthangady

ಅರಸಿನಮಕ್ಕಿ: 44ನೇ ವರ್ಷದ ಶಾರದಾ ಉತ್ಸವ ಭವ್ಯ ಶೋಭಯಾತ್ರೆ

ಅರಸಿನಮಕ್ಕಿ: 44ನೇ ವರ್ಷದ ಶಾರದಾ ಉತ್ಸವವನ್ನು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅರಸಿನಮಕ್ಕಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ಯಡ್ಕ ಇವರ ಸಹಕಾರದೊಂದಿಗೆ ಗೋಪಾಲ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ಅ.12ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಅ.3ರಿಂದ 11ರವರೆಗೆ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಳದಲ್ಲಿ ಆರಂಭಗೊಂಡು 12ನೇ ತಾರೀಕಿನಂದು ಅರಸಿನಮಕ್ಕಿಯಲ್ಲಿ ಬೆಳಿಗ್ಗೆ 8.30ಕ್ಕೆ ಶಾರದಾ ಮೂರ್ತಿ ಪ್ರತಿಷ್ಠೆ, ಬೆಳಿಗ್ಗೆ 9ರಿಂದ ಸಂಜೆ 3 ಗಂಟೆಗಳವರೆಗೆ ಸ್ಥಳೀಯ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ, ಮದ್ಯಾಹ್ನ 12.30ಕ್ಕೆ ಮಹಾಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು, 1 ಗಂಟೆಯಿಂದ ಭೋಜನ ಪ್ರಸಾದ ನಂತರ 3.30ಕ್ಕೆ ಮಹಾ ಪೂಜೆ ಮಹಾ ಮಂಗಳಾರತಿ ನಡೆದು ಭವ್ಯ ಶೋಭಯಾತ್ರೆಯ ಮೂಲಕ ಉಪ್ಪರಡ್ಕ ದೈವಸ್ಥಾನದ ವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಅರಸಿನಮಕ್ಕಿ ಕಪಿಲಾ ನದಿಯವರೆಗೆ ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ ಮೂಲಕ ಆಗಮಿಸಿ ಶಾರದಾ ಮೂರ್ತಿ ವಿಸರ್ಜನೆ ನಡೆಯಿತು.

ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ನಾರಾಯಣ ಗೌಡ ಉದ್ಯೆರೆ, ಕಾರ್ಯದರ್ಶಿ ಸತೀಶ್ ಶೆಟ್ಟಿ ಗುತ್ತು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಟ್ರಸ್ಟ್ ನ ಸರ್ವ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version