Site icon Suddi Belthangady

ನಂಬರ್ ಗೇಮ್‌ನತ್ತ ಬಿಜೆಪಿ-ಕಾಂಗ್ರೆಸ್ ಚಿತ್ತ 5,625 ಗ್ರಾ.ಪಂ. ಸದಸ್ಯರೇ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯ ಕಣ ರಂಗೇರತೊಡಗಿದೆ. ಜನಪ್ರತಿನಿಧಿಗಳು ಮತದಾರರಾಗಿರುವ ನಂಬರ್ ಗೇಮ್‌ನ ಈ ಚುನಾವಣೆ ಮೇಲ್ನೋಟಕ್ಕೆ ಬಿಜೆಪಿಗೆ ಸುಲಭದ ತುತ್ತಾದರೆ ಕಾಂಗ್ರೆಸ್ ಜಾತಿ ಲೆಕ್ಕಾಚಾರದಲ್ಲಿ ತೊಡಗಿದೆ.
ನಂಬರ್ ಗೇಮ್: ಈ ಚುನಾವಣೆಯಲ್ಲಿ ಒಟ್ಟು ೬,೦೩೭ ಮತದಾರರ ಪೈಕಿ ೩೫೦೦ಕ್ಕೂ ಅಧಿಕ ತಮ್ಮ ಬೆಂಬಲಿತ ಮತದಾರರಿದ್ದಾರೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಕಾಂಗ್ರೆಸ್ ಬೆಂಬಲಿತ ಓಟ್ ಬ್ಯಾಂಕ್ ಇರುವುದು ೨ ಸಾವಿರದ ಆಸುಪಾಸು. ೬,೦೩೭ ಮತದಾರರ ಪೈಕಿ ಗ್ರಾ.ಪಂ. ಸದಸ್ಯರೇ ೫,೬೨೫ ಮಂದಿ ಇದ್ದಾರೆ. ಇವರೇ ಚುನಾವಣೆಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಅಧಿಕೃತವಾಗಿ ಪಕ್ಷದ ಚಿಹ್ನೆ ಅಡಿಯಲ್ಲಿ ಸದಸ್ಯರಾಗಿಲ್ಲದಿದ್ದರೂ ಬಹುತೇಕರು ಪಕ್ಷಗಳ ಬೆಂಬಲದೊಂದಿಗೇ ಗೆದ್ದು ಸದಸ್ಯರಾಗಿರುತ್ತಾರೆ. ಮಾತ್ರವಲ್ಲದೆ ಪಕ್ಷಗಳ ಸಕ್ರಿಯ ಕಾರ್ಯಕರ್ತರೂ ಆಗಿರುತ್ತಾರೆ. ಎರಡೂ ಕಡೆಯ ೫೦-೧೦೦ ಓಟುಗಳು ಆಚೀಚೆ ಹೋಗಬಹುದು ಎನ್ನುವುದು ಬಿಟ್ಟರೆ ಬಹುತೇಕ ಓಟು ಆಯಾ ಪಕ್ಷಕ್ಕೇ ಬೀಳುವುದು ಸಾಮಾನ್ಯ. ಈ ಬಾರಿಯೂ ಅದಕ್ಕಿಂತ ಭಿನ್ನ ಪರಿಸ್ಥಿತಿ ಕಾಣುತ್ತಿಲ್ಲ. ಗ್ರಾ.ಪಂ. ಸದಸ್ಯರನ್ನು ಹೊರತುಪಡಿಸಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಶಾಸಕರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಸೇರಿ ೪೧೨ ಮತದಾರರಿದ್ದು ಇದರಲ್ಲೂ ಬಿಜೆಪಿ ಮತದಾರರೇ ಹೆಚ್ಚಿದ್ದಾರೆ.
೨೦೨೧ರಲ್ಲಿ ದಕ್ಷಿಣ ಕನ್ನಡ ದ್ವಿಸದಸ್ಯ ಸ್ಥಾನದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು. ಎಸ್‌ಡಿಪಿಐ ಅಭ್ಯರ್ಥಿ ಕೂಡ ಇದ್ದುದರಿಂದ ಚುನಾವಣೆ ಏರ್ಪಟ್ಟಿತ್ತು. ಕೋಟ ಮತ್ತು ಭಂಡಾರಿ ಇಬ್ಬರೂ ಅಗತ್ಯ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ವಿಧಾನ ಪರಿಷತ್ ಪ್ರವೇಶಿಸಿದ್ದರು. ಅಂದು ಒಟ್ಟು ೬೦೧೧ ಮತದಾರರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ೩೬೭೨ ಮತ ಪಡೆದಿದ್ದರೆ ಮಂಜುನಾಥ ಭಂಡಾರಿ ೨೦೭೯ ಮತಗಳಿಕೆ ಮಾಡಿದ್ದರು. ಎಸ್‌ಡಿಪಿಐ ಅಭ್ಯರ್ಥಿ ಶಾಫಿ ೨೦೪ ಓಟು ಪಡೆದಿದ್ದರೆ ೫೬ ಮತಗಳು ಅಸಿಂಧುಗೊಂಡಿದ್ದವು.
ಈ ಬಾರಿಯೂ ಜಿ.ಪಂ. ತಾಪಂ ಮತದಾರರಿಲ್ಲ! : ೨೦೨೧ರಲ್ಲಿ ವಿಧಾನಪರಿಷತ್ ಚುನಾವಣೆ ನಡೆದಾಗಲೂ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾಯಿತ ಸದಸ್ಯರು ಇರಲಿಲ್ಲ. ಈಗಲೂ ಇಲ್ಲ. ಕ್ಷೇತ್ರವಾರು ಮರುವಿಂಗಡಣೆ ಹಾಗೂ ಮೀಸಲಾತಿ ವಿಚಾರದ ಗೊಂದಲದ ಹಿನ್ನೆಲೆಯಲ್ಲಿ ಇವೆರಡೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದೆ ವರ್ಷಗಳೇ ಕಳೆದಿದೆ.

ಜೆಪಿಯ ಕಿಶೋರ್ ಕುಮಾರ್, ಕಾಂಗ್ರೆಸ್‌ನ ರಾಜು ಎಸ್.ಪೂಜಾರಿಯವರ ಆಸ್ತಿಯ ವಿವರ: ವಿಧಾನ ಪರಿಷತ್ ಉಪಚುನಾವಣೆಯ ಅಖಾಡಕ್ಕಿಳಿದಿರುವ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಮತ್ತು ಕಾಂಗ್ರೆಸ್‌ನ ರಾಜು ಎಸ್.ಪೂಜಾರಿ ಬೈಂದೂರು ಅವರು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ವಿವಿರ ದಾಖಲಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಕಿಶೋರ್ ಕುಮಾರ್ ಪುತ್ತೂರು ಅವರು ಒಟ್ಟು ೩೩.೬೧ ಲ.ರೂ. ಹಾಗೂ ಅವರ ಪತ್ನಿ ೪೬.೮೫ ಲಕ್ಷ ರೂ. ಮೌಲ್ಯದ ಚರಾಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಪರಶು ಲ್ಯಾಂಡ್ ಫೀಲ್ಡ್‌ನಲ್ಲಿ ಮಾಡಿರುವ ೧೭.೮೭ ಲಕ್ಷ ರೂಪಾಯಿ ಹೂಡಿಕೆ ಸೇರಿದೆ. ಕಿಶೋರ್ ಕುಮಾರ್ ಅವರು ಪುತ್ತೂರು ತಾಲೂಕಿನ ಸರ್ವೆಯಲ್ಲಿ ಸ್ವಂತ ಜಾಗ ಸಹಿತ ಹೆಂಚಿನ ಮನೆ, ಮಂಗಳೂರು ಪಡುಪೆರಾರದಲ್ಲಿ ಕೃಷಿಯೇತರ ಜಮೀನು ಸಹಿತ ೧.೧೨ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರಿಗೆ ೬.೦೬ ಲಕ್ಷ ರೂ.ನ ಚಿನ್ನದ ಸಾಲ, ೧೧.೮೮ ಲ.ರೂ. ದೀರ್ಘಾವಧಿ ಕೃಷಿ ಸಾಲ ಮತ್ತು ಅವರ ಪತ್ನಿಗೆ ೩೨.೮ ಲಕ್ಷ ರೂ ಕಾರಿನ ಸಾಲವಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಎಸ್. ಪೂಜಾರಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ ೨.೪೮ ಲ.ರೂ. ಮೊತ್ತದ ಠೇವಣಿ, ೬.೨೪ ಲಕ್ಷ ರೂ ಎಲ್‌ಐಸಿ, ೧.೮೮ ಲಕ್ಷ ರೂ ಮೌಲ್ಯದ ಷೇರುಗಳು, ಒಂದು ಹ್ಯುಂಡೈ ಕ್ರೇಟಾ ಕಾರು, ೧.೮೨ ಲ.ರೂ ಮೌಲ್ಯದ ಚಿನ್ನ ಸಹಿತ ೪೦.೩೨ ಲ.ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ೧೭.೪೦ ಲ. ರೂ. ಮಕ್ಕಳಿಬ್ಬರು ೧.೦೨ ಲ.ರೂ. ಹಾಗೂ ೧.೧೬ ಲ. ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ರಾಜು ಪೂಜಾರಿ ಒಟ್ಟು ೬೫.೪೦ ಲ.ರೂ. ಮೌಲ್ಯದ ಕೃಷಿ ಭೂಮಿ, ವಸತಿ ಕಟ್ಟಡ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ೨೪.೦೪ ಲ.ರೂ. ಸಾಲ ಪಡೆದಿದ್ದಾರೆ.

ಬಿಜೆಪಿಯ ಕಿಶೋರ್ ಕುಮಾರ್, ಕಾಂಗ್ರೆಸ್‌ನ ರಾಜು ಎಸ್.ಪೂಜಾರಿಯವರ ಆಸ್ತಿಯ ವಿವರ
ವಿಧಾನ ಪರಿಷತ್ ಉಪಚುನಾವಣೆಯ ಅಖಾಡಕ್ಕಿಳಿದಿರುವ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಮತ್ತು ಕಾಂಗ್ರೆಸ್‌ನ ರಾಜು ಎಸ್.ಪೂಜಾರಿ ಬೈಂದೂರು ಅವರು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ವಿವಿರ ದಾಖಲಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಕಿಶೋರ್ ಕುಮಾರ್ ಪುತ್ತೂರು ಅವರು ಒಟ್ಟು ೩೩.೬೧ ಲ.ರೂ. ಹಾಗೂ ಅವರ ಪತ್ನಿ ೪೬.೮೫ ಲಕ್ಷ ರೂ. ಮೌಲ್ಯದ ಚರಾಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಪರಶು ಲ್ಯಾಂಡ್ ಫೀಲ್ಡ್‌ನಲ್ಲಿ ಮಾಡಿರುವ ೧೭.೮೭ ಲಕ್ಷ ರೂಪಾಯಿ ಹೂಡಿಕೆ ಸೇರಿದೆ. ಕಿಶೋರ್ ಕುಮಾರ್ ಅವರು ಪುತ್ತೂರು ತಾಲೂಕಿನ ಸರ್ವೆಯಲ್ಲಿ ಸ್ವಂತ ಜಾಗ ಸಹಿತ ಹೆಂಚಿನ ಮನೆ, ಮಂಗಳೂರು ಪಡುಪೆರಾರದಲ್ಲಿ ಕೃಷಿಯೇತರ ಜಮೀನು ಸಹಿತ ೧.೧೨ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರಿಗೆ ೬.೦೬ ಲಕ್ಷ ರೂ.ನ ಚಿನ್ನದ ಸಾಲ, ೧೧.೮೮ ಲ.ರೂ. ದೀರ್ಘಾವಧಿ ಕೃಷಿ ಸಾಲ ಮತ್ತು ಅವರ ಪತ್ನಿಗೆ ೩೨.೮ ಲಕ್ಷ ರೂ ಕಾರಿನ ಸಾಲವಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಎಸ್. ಪೂಜಾರಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ ೨.೪೮ ಲ.ರೂ. ಮೊತ್ತದ ಠೇವಣಿ, ೬.೨೪ ಲಕ್ಷ ರೂ ಎಲ್‌ಐಸಿ, ೧.೮೮ ಲಕ್ಷ ರೂ ಮೌಲ್ಯದ ಷೇರುಗಳು, ಒಂದು ಹ್ಯುಂಡೈ ಕ್ರೇಟಾ ಕಾರು, ೧.೮೨ ಲ.ರೂ ಮೌಲ್ಯದ ಚಿನ್ನ ಸಹಿತ ೪೦.೩೨ ಲ.ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ೧೭.೪೦ ಲ. ರೂ. ಮಕ್ಕಳಿಬ್ಬರು ೧.೦೨ ಲ.ರೂ. ಹಾಗೂ ೧.೧೬ ಲ. ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ರಾಜು ಪೂಜಾರಿ ಒಟ್ಟು ೬೫.೪೦ ಲ.ರೂ. ಮೌಲ್ಯದ ಕೃಷಿ ಭೂಮಿ, ವಸತಿ ಕಟ್ಟಡ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ೨೪.೦೪ ಲ.ರೂ. ಸಾಲ ಪಡೆದಿದ್ದಾರೆ.

Exit mobile version