Site icon Suddi Belthangady

ಬೆಳ್ತಂಗಡಿ: ಲೋಬೊ ಮೋಟರ್ಸ್ ದ್ವಿಚಕ್ರ ವಾಹನಗಳ ಅಧಿಕೃತ ಮಳಿಗೆಯಲ್ಲಿ ಆಯುಧ ಪೂಜೆ ಪ್ರಯುಕ್ತ ಮಳಿಗೆ ಶುದ್ದೀಕರಣ

ಬೆಳ್ತಂಗಡಿ: ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿ ಲೋಬೊ ಟವರ್ಸ್ ನಲ್ಲಿ ಕಾರ್ಯಾಚರಿಸುವ ಲೋಬೊ ಮೋಟರ್ಸ್ ಟಿ.ವಿ.ಎಸ್. ಕಂಪೆನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಳಿಗೆಯಲ್ಲಿ ಆಯುಧ ಪೂಜೆ ಪ್ರಯುಕ್ತ ಮಳಿಗೆ ಶುದ್ದೀಕರ ಅ.11ರಂದು ನಡೆಯಿತು.

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಧರ್ಮಗುರು ವ. ಫಾ. ವಾಲ್ಟರ್ ಡಿಮೆಲ್ಲೋ ಆಶೀರ್ವಚನ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಚರ್ಚ್ ಪಾಲನಾ ಪರಿಷತ್‌ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಆಯೋಗದ ಸಂಚಾಲಕಿ ಫೌಲಿನ್ ರೇಗೊ, ವಕೀಲರಾದ ಅಲೋಶಿಸ್ ಲೋಬೊ, ಗ್ರೆಟ್ಟಾ ಟಿ. ಲೋಬೊ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಪಿರೇರಾ, ನಿವೃತ್ತ ಶಿಕ್ಷಕಿ ಜೂಲಿಯಾನ ಡಿ’ಸೋಜಾ, ಶಿಕ್ಷಕಿ ಥಿಯೋಪಿಲ ಡಿ’ಸೋಜಾ, ಶಿಕ್ಷಕಿ ಸಿಲ್ವಿ, ಟೈಲರ್ಸ್‌ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ವಲೇರಿಯನ್ ಪಾಯ್ಸ್, ರೊನಾಲ್ಡ್ ಡಿಮೆಲ್ಲೊ, ಜೆಸಿಂತಾ ಮೊನಿಸ್ ರೋಶ್ನಿ ಪಿಂಟೊ, ಕಛೇರಿ ವ್ಯವಸ್ಥಾಪಕ ಅಶೋಕ್ ಮೋನಿಸ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮಾಲಕರಾದ ರೊನಾಲ್ಡ್ ಲೋಬೊ ಸ್ವಾಗತಿಸಿ, ವಂದಿಸಿದರು.

Exit mobile version