ಗುರುವಾಯನಕೆರೆ: ಇಲ್ಲಿನ ಶಕ್ತಿನಗರದಲ್ಲಿ ಇಂದು ಮುಂಜಾನೆ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಗುರಯವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡುವೆ ಅಪಘಾತ ಸಂಭವಿಸಿದೆ.ಐ20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.ಕಾರು ಎರಡೂ ಉಲ್ಟಾ ಬಿದ್ದಿವೆ
ಹೊಂಡ ತಪ್ಪಿಸಲು ಹೋಗಿ ಕಾರುಗಳ ನಡುವೆ ಅಪಘಾತ:ಗುರುವಾಯನಕೆರೆ ಶಕ್ತಿನಗರದಲ್ಲಿ ಘಟನೆ:ಎರಡೂ ಕಾರುಗಳು ಜಖಂ
