ಬದನಾಜೆ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬೆಳಗ್ಗಿನ ಪ್ರಾರ್ಥನೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ, ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಬಹುಪಯೋಗಿ ಸಭಾಂಗಣ ರಚನೆಗೆ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಶಿಲಾನ್ಯಾಸಗೈದು ಶುಭ ಹಾರೈಸಿದರು.
ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳನ್ನು ಸ್ಥಳೀಯ ಕೋರ್ಯಾರು ಗುತ್ತುವಿನ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಉಪಾಧ್ಯಾಯ ನೆರವೇರಿಸಿದರು. ಈ ಸಭಾಂಗಣವನ್ನು ಸುಮಾರು 15 ಲಕ್ಷ ಮೊತ್ತದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಶಾಲಾ ಹಳೆ ವಿದ್ಯಾರ್ಥಿಗಳ ‘ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ’, ಪೋಷಕರು, ದಾನಿಗಳ ನೆರವಿನಿಂದ ಈ ಕಾರ್ಯಕ್ಕೆ ಮುಂದಾಗಿದೆ.
ಈ ಸಂದರ್ಭದಲ್ಲಿ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯಗೌಡ ಮಾಚಾರು, ಸುಜ್ಞಾನ ನಿಧಿ ಯೋಜನೆಯ ಸಂಚಾಲಕ ಸುಂದರ ಬಂಗೇರ, ಸಹ ಸಂಚಾಲಕ ಸೋಮಶೇಖರ್ ಕೆ., ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಿಲ್ ಡಿ’ಸೋಜ, ಗ್ರಾ.ಪಂ. ಸದಸ್ಯರುಗಳಾದ ಬಿ..ಎಂ. ಇಲ್ಯಾಸ್, ಸವಿತಾ, ಲಲಿತ, ಭಜನಾ ಮಂಡಳಿ ಅಧ್ಯಕ್ಷ ಸನತ್ ಕುಮಾರ್, ಪ್ರಗತಿ ಯುವಕ ಮಂಡಲ ಅಧ್ಯಕ್ಷ ಪಿತಾಂಬರ ಪೂಜಾರಿ, ಯುವತಿ ಮಂಡಲದ ಅಧ್ಯಕ್ಷೆ ನವೀನ, ನಿವೃತ್ತ ಶಿಕ್ಷಕ ಬಾಬುಗೌಡ ಬಾಜಿಮಾರು, ಬದನಾಜೆ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಮುನಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಮಾಚಾರು ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್, ಶಿಕ್ಷಕಿ ಜಯಲಕ್ಷ್ಮಿ ಸಹಕರಿಸಿದರು.